ಉದಯವಾಹಿನಿ, ರಾಮನಗರ: ಚನ್ನಪಟ್ಟಣ-ರಾಮನಗರ ಭಾಗದಲ್ಲಿ ಕಾಡಾನೆ ಉಪಟಳ ಹೆಚ್ಚಳ ಹಿನ್ನೆಲೆ ಎರಡು ಕಾಡಾನೆಗಳ ಸೆರೆಗೆ ಸರ್ಕಾರ ಅನುಮತಿ ನೀಡಿದ್ದು, ಇಂದಿನಿಂದ ಚನ್ನಪಟ್ಟಣದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿದೆ. ಚನ್ನಪಟ್ಟಣದ ಬಿ.ವಿ.ಹಳ್ಳಿ ಗ್ರಾಮದ ಬಳಿಯಿಂದ ಕಾರ್ಯಾಚರಣೆ ಆರಂಭಿಸಲಾಗಿದ್ದು, 6 ಸಾಕಾನೆಗಳಿಂದ ಪುಂಡಾನೆ ಸೆರೆ ಆಪರೇಷನ್ ನಡೆಯಲಿದೆ. ಸುಗ್ರೀವ, ಕಂಜನ್, ಧನಂಜಯ, ಹರ್ಷ, ಈಶ್ವರ, ಅಯ್ಯಪ್ಪ ಆನೆಗಳಿಂದ ಪುಂಡಾನೆ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆ ಆರಂಭಿಸಿದ್ದು, ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಕಾರ್ಯಾಚರಣೆ ಆರಂಭಿಸಿದೆ.

ಡಿಸಿಎಫ್ ರಾಮಕೃಷ್ಣಪ್ಪ ನೇತೃತ್ವದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯಲಿದ್ದು, ಡ್ರೋನ್ ಮೂಲಕ ಪುಂಡಾನೆಗಳನ್ನು ಪತ್ತೆಹಚ್ಚಿ ಬಳಿಕ ಅರವಳಿಕೆ ಮದ್ದು ನೀಡಿ ಕಾಡಾನೆ ಸೆರೆ ಹಿಡಿಯಲು ತಯಾರಿ ನಡೆಸಲಾಗಿದೆ.

Leave a Reply

Your email address will not be published. Required fields are marked *

error: Content is protected !!