ಉದಯವಾಹಿನಿ, ಪ್ರೋಟೀನ್ ಅಂದ ತಕ್ಷಣ ನಮ್ಮ ತಲೆಗೆ ಬರೋದು ಮೊಟ್ಟೆ . ಜಿಮ್‌ಗೆ ಹೋಗೋರು, ಫಿಟ್ನೆಸ್ ಕಾಪಾಡಿಕೊಳ್ಳೋರು ಪ್ರೋಟೀನ್‌ಗಾಗಿ ಬರೀ ಮೊಟ್ಟೆನೇ ಡಿಪೆಂಡ್ ಆಗಿರ್ತಾರೆ. ಆದ್ರೆ, ನಮ್ಮ ಭಾರತೀಯ ಅಡುಗೆ ಮನೆಯಲ್ಲೇ ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಕೊಡೋ ಪವರ್‌ಫುಲ್ ಆದ ದೇಸಿ ತಿಂಡಿಗಳಿವೆ ಅನ್ನೋದು ನಿಮಗೆ ಗೊತ್ತಾ? ಪೌಷ್ಟಿಕಾಂಶ ತಜ್ಞರ ಪ್ರಕಾರ, ಒಬ್ಬ ಸಾಮಾನ್ಯ ವ್ಯಕ್ತಿಗೆ ಪ್ರತಿದಿನ ತನ್ನ ತೂಕದ ಪ್ರತಿ ಕೆಜಿಗೆ 0.8 ರಿಂದ 1 ಗ್ರಾಂ ಪ್ರೋಟೀನ್ ಬೇಕು. ಅಂದ್ರೆ 60-70 ಕೆಜಿ ತೂಕ ಇರೋರಿಗೆ ದಿನಕ್ಕೆ 50-70 ಗ್ರಾಂ ಪ್ರೋಟೀನ್ ಬೇಕಾಗುತ್ತೆ. ಬೆಳಗಿನ ಬ್ರೇಕ್‌ಫಾಸ್ಟ್‌ನಲ್ಲಿ ಪ್ರೋಟೀನ್ ಜಾಸ್ತಿ ಇದ್ರೆ ಮಸಲ್ಸ್ ಸ್ಟ್ರಾಂಗ್ ಆಗುತ್ತೆ, ಪದೇ ಪದೇ ಹಸಿವಾಗೋದೂ ತಪ್ಪುತ್ತೆ. ಬನ್ನಿ, ಮೊಟ್ಟೆಗಿಂತ ಸೂಪರ್ ಆಗಿರೋ ಆ ತಿಂಡಿಗಳು ಯಾವುವು ಅಂತ ನೋಡೋಣ.
ಹೆಸರುಬೇಳೆ ಚಿಲ್ಲಾದಲ್ಲಿ ಅಡಗಿದೆ ಮ್ಯಾಜಿಕ್!
ಬೆಳಗಿನ ಜಾವ ಹೆಸರುಬೇಳೆ ನೆನೆಸಿ, ಅದಕ್ಕೆ ಹಸಿಮೆಣಸಿನಕಾಯಿ, ಸ್ವಲ್ಪ ಶುಂಠಿ ಹಾಕಿ ರುಬ್ಬಿ ಮಾಡೋ ಗರಿಗರಿಯಾದ ಚಿಲ್ಲಾ (ದೋಸೆ) ತಿಂದ್ರೆ ರುಚಿಗೆ ರುಚಿ, ಶಕ್ತಿಗೆ ಶಕ್ತಿ! ಇದರಲ್ಲಿ ಬರೋಬ್ಬರಿ 14-16 ಗ್ರಾಂ ಪ್ರೋಟೀನ್ ಸಿಗುತ್ತೆ. ಇದನ್ನ ಮೊಸರು ಅಥವಾ ಪುದೀನಾ ಚಟ್ನಿ ಜೊತೆ ನೆಂಚ್ಕೊಂಡು ತಿಂದ್ರೆ ಪ್ರೋಟೀನ್ ಲೆವೆಲ್ ಇನ್ನೂ ಪೀಕ್‌ಗೆ ಹೋಗುತ್ತೆ. ದಿನವಿಡೀ ಆಕ್ಟಿವ್ ಆಗಿರೋಕೆ ಇದು ಬೆಸ್ಟ್.
ಹೊಟ್ಟೆ ತುಂಬಿಸೋ ಕಡಲೆಹಿಟ್ಟಿನ ಚಿಲ್ಲಾ!
ಕಡಲೆಹಿಟ್ಟಿಗೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊ ಜೊತೆಗೆ ಪಾಲಕ್ ಸೊಪ್ಪು ಮಿಕ್ಸ್ ಮಾಡಿ ಚಿಲ್ಲಾ ಹೊಯ್ದರೆ ಅದರ ಮಜಾನೇ ಬೇರೆ. ಇದರಲ್ಲಿ 12-14 ಗ್ರಾಂ ಪ್ರೋಟೀನ್ ಇರುತ್ತೆ. ಬೆಳಿಗ್ಗೆ ಇದನ್ನ ತಿಂದ್ರೆ ಸಾಕು, ಹೊಟ್ಟೆನೂ ಫುಲ್ ಆಗಿರುತ್ತೆ, ಬೇಗ ಹಸಿವಾಗಲ್ಲ. ಬ್ರೇಕ್‌ಫಾಸ್ಟ್‌ಗೆ ದಿಢೀರ್ ಅಂತ ಮಾಡಿಕೊಳ್ಳಬಹುದಾದ ಅತ್ಯುತ್ತಮ ಆಯ್ಕೆ ಇದಾಗಿದೆ.
ಪನೀರ್ ಬುರ್ಜಿ ಜೊತೆ ಮಲ್ಟಿಗ್ರೇನ್ ರೊಟ್ಟಿ!
ಪನೀರ್ ಅಂದ್ರೆನೇ ಪ್ರೋಟೀನ್‌ನ ದೊಡ್ಡ ಗಣಿ. ಸ್ವಲ್ಪ ಎಣ್ಣೆಗೆ ಈರುಳ್ಳಿ, ಟೊಮೆಟೊ ಹಾಕಿ ಘಮಘಮಿಸುವ ಪನೀರ್ ಬುರ್ಜಿ ಮಾಡಿ, ಅದನ್ನ ಮಲ್ಟಿಗ್ರೇನ್ ರೊಟ್ಟಿ ಜೊತೆ ತಿಂದ್ರೆ ಬರೋಬ್ಬರಿ 18-20 ಗ್ರಾಂ ಪ್ರೋಟೀನ್ ನಿಮ್ಮ ದೇಹ ಸೇರುತ್ತೆ. ಇದಂತೂ ಪಕ್ಕಾ ಮೊಟ್ಟೆಗಿಂತಲೂ ಡಬಲ್ ಪವರ್ ಕೊಡೋ ಭರ್ಜರಿ ಕಾಂಬಿನೇಷನ್. ಮಸಲ್ಸ್ ಬಿಲ್ಡ್ ಮಾಡೋರಿಗೆ ಇದು ಸೂಪರ್ ಫುಡ್.
ಮೊಳಕೆ ಕಾಳಿನ ಸಲಾಡ್‌ನ ಕಮಾಲ್!
ಹೆಸರುಕಾಳನ್ನ ಮೊಳಕೆ ಬರಿಸಿ ತಿಂದ್ರೆ ಅದರಲ್ಲಿನ ಪೌಷ್ಟಿಕಾಂಶ ನೂರು ಪಟ್ಟು ಹೆಚ್ಚಾಗುತ್ತೆ. ಈ ಮೊಳಕೆ ಕಾಳಿಗೆ ಸೌತೆಕಾಯಿ, ಕ್ಯಾರೆಟ್ ಹೆಚ್ಚಿ ಹಾಕಿ, ಮೇಲಿಂದ ಸ್ವಲ್ಪ ನಿಂಬೆಹಣ್ಣಿನ ರಸ ಹಿಂಡಿ ತಿಂದ್ರೆ 14-15 ಗ್ರಾಂ ಪ್ರೋಟೀನ್ ಗ್ಯಾರಂಟಿ. ಇದು ಜೀರ್ಣಕ್ರಿಯೆಗೂ ಸೂಪರ್, ಮೈಗೂ ತಂಪು.
