ಉದಯವಾಹಿನಿ, ಅನೇಕರು ಚಾರ್ ಧಾಮ್ ಯಾತ್ರೆಗೆ ಹೋಗಲು ಬಯಸುತ್ತಾರೆ. ಹಿಮಾಲಯದ ಎತ್ತರದ ಹಿಮಭರಿತ ಪರ್ವತ ಪ್ರದೇಶಗಳಲ್ಲಿ ನೆಲೆಗೊಂಡಿರುವ ಈ ದೇವಾಲಯಗಳು ವರ್ಷದಲ್ಲಿ ಕೆಲವೇ ಕೆಲವು ಬಾರಿ ತೆರೆದಿರುತ್ತವೆ. ಪ್ರಸಕ್ತ ವರ್ಷದಲ್ಲಿ ಈ ದೇವಾಲಯಗಳು ಇನ್ನೂ ಕೆಲವು ದಿನಗಳಲ್ಲಿ ತೆರೆಯುವುದರಿಂದ ಭಕ್ತರು ಯಾತ್ರೆಗಾಗಿ ಕಾಯುತ್ತಿದ್ದಾರೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ಸ್ಥಳಗಳನ್ನು ಚಾರ್ ಧಾಮ್ (ನಾಲ್ಕು ದೇವಾಲಯಗಳು) ಎಂದು ಕರೆಯಲಾಗುತ್ತದೆ. ಈ ದೇವಾಲಯಗಳಲ್ಲಿ ಯಮುನೋತ್ರಿ, ಗಂಗೋತ್ರಿ, ಮತ್ತು ನಂತರ ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳು ತೆರೆಯುತ್ತವೆ.
ಏಪ್ರಿಲ್ನಿಂದ ನವೆಂಬರ್ವರೆಗೆ ಓಪನ್: ಕಳೆದ ವರ್ಷ ಏಪ್ರಿಲ್ 30ರಂದು ಯಮುನೋತ್ರಿ ಮತ್ತು ಗಂಗೋತ್ರಿ ದೇವಾಲಯಗಳನ್ನು ತೆರೆಯುವುದರೊಂದಿಗೆ ಚಾರ್ ಥಾಮ್ ಯಾತ್ರೆ ಪ್ರಾರಂಭವಾಯಿತು. ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಕ್ರಮವಾಗಿ ಮೇ 2 ಮತ್ತು 4 ರಂದು ತೆರೆಯಲಾಗಿತ್ತು. ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳನ್ನು ಅಕ್ಟೋಬರ್ 22 ಮತ್ತು 23 ರಂದು ಮುಚ್ಚಲಾಗಿತ್ತು. ಬಳಿಕ ಒಂದು ತಿಂಗಳ ನಂತರ ಅಕ್ಟೋಬರ್ 23 ಮತ್ತು ನವೆಂಬರ್ 25 ರಂದು ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳನ್ನು ಮುಚ್ಚಲಾಗಿತ್ತು.
ಪ್ರಸಕ್ತ ವರ್ಷದಲ್ಲಿ ಯಾತ್ರೆ ಹೇಗಿರಲಿದೆ? ಚಾರ್ ಥಾಮ್ ದೇವಾಲಯಗಳಲ್ಲಿ ಯಮುನೋತ್ರಿಯ ಬಾಗಿಲುಗಳು ಬೇಗನೆ ತೆರೆಯುತ್ತವೆ. ಯಮುನೋತ್ರಿ ಹಾಗೂ ಗಂಗೋತ್ರಿ ಏಪ್ರಿಲ್ 19ರಂದು, ಕೇದಾರನಾಥ ಏಪ್ರಿಲ್ 22ರಂದು ಮತ್ತು ಬದರಿನಾಥ ಏಪ್ರಿಲ್ 23ರಂದು ತೆರೆಯುತ್ತವೆ. ಭಕ್ತರು ಮೊದಲು ಯಮುನೋತ್ರಿಯನ್ನು ಭೇಟಿ ಮಾಡಿ ನಂತರ ಈ ಕ್ರಮದಲ್ಲಿ ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಕ್ಕೆ ಭೇಟಿ ನೀಡಬಹುದು. ಯಮುನೋತ್ರಿ ಯಮುನಾ ನದಿಯ ಜನ್ಮಸ್ಥಳವಾಗಿದೆ. ಆದರೆ, ಭಕ್ತರು ಇಲ್ಲಿಗೆ ಕಾಲ್ನಡಿಗೆಯಲ್ಲಿ ತಲುಪುತ್ತಾರೆ. ವೃದ್ಧರು ಮಾತ್ರ ಕುದುರೆಗಳು ಅಥವಾ ಪಲ್ಲಕ್ಕಿಗಳ ಮೇಲೆ ಪ್ರಯಾಣಿಸುತ್ತಾರೆ. ಇದು ಋಷಿಕೇಶದಿಂದ ಸುಮಾರು 210 ಕಿಮೀ ದೂರದಲ್ಲಿದೆ. ಗಂಗೆಯ ಜನ್ಮಸ್ಥಳವಾದ ಗೋಮುಖ ಗಂಗೋತ್ರಿಯಿಂದ 19 ಕಿ.ಮೀ ದೂರದಲ್ಲಿದೆ. ಗೋಮುಖದಲ್ಲಿ ಜನಿಸಿದ ಭಾಗೀರಥಿ, ದೇವಪ್ರಯಾಗ ಬಳಿಯ ಅಲಕನಂದಾದೊಂದಿಗೆ ವಿಲೀನಗೊಂಡು ಗಂಗೆಯಾಗಿ ಹರಿಯುತ್ತದೆ.
