ಉದಯವಾಹಿನಿ, ಗಾಂ„ನಗರ: ಅಮೆರಿಕದ ಪ್ರಮುಖ ಸೆಮಿಕಂಡಕ್ಟರ್ ಉತ್ಪಾದನಾ ಸಂಸ್ಥೆಯಾದ ಮೈಕ್ರಾನ್ ಕಂಪನಿ ಮುಖ್ಯಸ್ಥ ಸಂಜಯ್ ಮೆಹ್ರೋತ್ರಾ ಅವರು ಗುಜರಾತ್‍ನ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಅವರು ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಹೆಚ್ಚಿಸಲು ಯುಎಸ್ ಮೂಲದ ಕಂಪನಿಯ ಯೋಜನೆಗಳ ಕುರಿತು ಚರ್ಚಿಸಿದರು. ಭಾರತದ ಹೊಸ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ, ಮೂರು ದಿನಗಳ ಸೆಮಿಕಾನ್‍ಇಂಡಿಯಾ 2023 ಸಮ್ಮೇಳನಕ್ಕೆ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದಾರೆ.
ಉದ್ಯಮ ಮತ್ತು ಉದ್ಯಮ ಸಂಘಗಳ ಸಹಭಾಗಿತ್ವದಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಆಯೋಜಿಸಿದ ಸಮ್ಮೇಳನವು ಅದರ ಎರಡನೇ ಆವೃತ್ತಿಯಾಗಿದ್ದು, ಸೆಮಿಕಂಡಕ್ಟರ್ ವಿನ್ಯಾಸ, ಉತ್ಪಾದನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಭಾರತವನ್ನು ಜಾಗತಿಕ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಸೆಮಿಕಾನ್ ಇಂಡಿಯಾ ಬೆಂಗಳೂರಿನಲ್ಲಿ ನಡೆದಿತ್ತು.

Leave a Reply

Your email address will not be published. Required fields are marked *

error: Content is protected !!