ಉದಯವಾಹಿನಿ, ವಾಷಿಂಗ್ಟನ್​, ಅಮೆರಿಕ: ನೆರೆಯ ಅಫ್ಘಾನಿಸ್ತಾನದ ಮೇಲೆ ಯುದ್ಧ ಸಾರಿರುವ ಪಾಕಿಸ್ತಾನವನ್ನು ಬೆಂಬಲಿಸುವುದಾಗಿ ಅಮೆರಿಕ ತಿಳಿಸಿದೆ. ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ತಾಲಿಬಾನ್​ ದಾಳಿಯನ್ನು ಪಾಕಿಸ್ತಾನ ಸೂಕ್ತವಾಗಿ ನಿರ್ವಹಣೆ ಮಾಡಿದ್ದು, ಪಾಕಿಸ್ತಾನವನ್ನು ಬೆಂಬಲಿಸುವುದಾಗಿ ಪಾಕಿಸ್ತಾನದ ಅಧೀನ ಕಾರ್ಯದರ್ಶಿ ಜೊತೆಗಿನ ಮಾತುಕತೆಯ ನಂತರ, ರಾಜಕೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಅಲಿಸನ್ ಹೂಕರ್ ಎಕ್ಸ್​ ಜಾಲತಾಣದಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಅಮ್ನಾ ಬಲೋಚ್​ ಮಾತನಾಡಿ, ಪಾಕಿಸ್ತಾನ ಮತ್ತು ತಾಲಿಬಾನ್ ನಡುವಿನ ಇತ್ತೀಚಿನ ಸಂಘರ್ಷದಲ್ಲಿ ಸಾವನ್ನಪ್ಪಿದ ಜೀವಗಳಿಗೆ ಸಂತಾಪ ಸೂಚಿಸಿದರು. ಆದರೆ, ಅವರು ಪಾಕ್​ ಮತ್ತು ಅಫ್ಘಾನ್​ ನಡುವಿನ ಸಂಘರ್ಷ ಕೊನೆಗೊಳಿಸುವ ಕುರಿತು ಕರೆ ನೀಡಲಿಲ್ಲ. ಈ ಹಿಂದೆ ಮಾತನಾಡಿದ ಬ್ರಿಟನ್​, ಉಭಯ ದೇಶಗಳ ನಡುವಿನ ಬಿಕ್ಕಟ್ಟನ್ನು ಕೊನೆಗೊಳಿಸುವಂತೆ ತಿಳಿಸಿದರು. ಚೀನಾ ಕೂಡ ಕದನ ವಿರಾಮ ಮಾತುಕತೆ ನಡೆಸುವಂತೆ ಕರೆ ನೀಡಿತು. 2021ರಲ್ಲಿ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೈನ ಹಿಂಪಡೆದ ಮೇಲೆ ತಾಲಿಬಾನ್​ ಅಧಿಕಾರಕ್ಕೆ ಬಂದ ನಂತರ, ಅಫ್ಘಾನಿಸ್ತಾನದ ಪ್ರಮುಖ ನಗರಗಳ ಮೇಲೆ ಪಾಕಿಸ್ತಾನ ಬಾಂಬ್ ದಾಳಿ ಮಾಡಿದೆ.
ಈ ಹಿಂದೆ ಅಫ್ಘಾನಿಸ್ತಾನ ಯುದ್ಧವು ಪಾಕಿಸ್ತಾನದೊಂದಿಗಿನ ಅಮೆರಿಕದ ಸಂಬಂಧವನ್ನು ಹದಗೆಡಿಸಿದೆ. ಮಾಜಿ ಅಧ್ಯಕ್ಷ ಜೋ ಬೈಡನ್​ ಅವರು ತಾಲಿಬಾನ್‌ಗೆ ಹಿಂದೆ ಬೆಂಬಲ ನೀಡಿದ್ದರಿಂದ ಇಸ್ಲಾಮಾಬಾದ್‌ನೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಅಮೆರಿಕವು ಪಾಶ್ಚಿಮಾತ್ಯ ಪರ ಸರ್ಕಾರವನ್ನು ಬೆಂಬಲಿಸಿತ್ತು.
ಆದರೆ, ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಈ ಧೋರಣೆ ಬದಲಾಯಿಸಿದ್ದು, ಪಾಕಿಸ್ತಾನದ ಜೊತೆಗೆ ಆತ್ಮೀಯ ಸಂಬಂದ ಮುಂದುವರೆಸಿದ್ದಾರೆ. ಕಳೆದ ವರ್ಷ ಮೇನಲ್ಲಿ ನಡೆದ ಭಾರತ- ಪಾಕಿಸ್ತಾನ ನಡುವಿನ ಸಂಘರ್ಷದ ಸಂದರ್ಭದಲ್ಲಿ ಅಮೆರಿಕ ಮಧ್ಯಸ್ಥಿಕೆವಹಿಸಿತು ಎಂದು ಪಾಕಿಸ್ತಾನ ಹೊಗಳುವ ಪ್ರಯತ್ನ ಮಾಡಿತ್ತು. ಟ್ರಂಪ್​ಗೆ ನೊಬೆಲ್​ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿತ್ತು. ಇದೀಗ ಅಪ್ಘಾನನಿಸ್ತಾನದ ಮೇಲಿನ ದಾಳಿಯಲ್ಲೂ ಟ್ರಂಪ್, ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಶ್ಲಾಘಿಸಿದ್ದು, ಬೆಂಬಲಕ್ಕೆ ನಿಂತಿದ್ದಾರೆ.

ನಿಮಗೆ ಒಬ್ಬ ಮಹಾನ್ ಪ್ರಧಾನಿ ಹಾಗೂ ಮಹಾನ್​ ನಾಯಕರಿದ್ದಾರೆ. ಪಾಕಿಸ್ತಾನ ಉತ್ತಮ ಕಾರ್ಯ ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಶಹಬ್ಬಾಷ್​​ಗಿರಿ ಕೊಟ್ಟಿದ್ದಾರೆ.ಪಾಕಿಸ್ತಾನ ವಾಯುಪಡೆಯು ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾದಲ್ಲಿರುವ ತಾಲಿಬಾನ್‌ನ ಪ್ರಮುಖ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಪಿಟಿವಿ ನ್ಯೂಸ್ ವರದಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!