
ಉದಯವಾಹಿನಿ, ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ಬಹುತೇಕ ಶುರುವಾದಂತೆ ಕಾಣ್ತಿದೆ. ಅಮೆರಿಕ – ಇಸ್ರೇಲ್ ಜಂಟಿ ದಾಳಿ ಬೆನ್ನಲ್ಲೇ ಇರಾನ್ ಕೂಡ ಆಕ್ರಮಣಕಾರಿ ಹೆಜ್ಜೆ ಇಟ್ಟಿದೆ. ಮೊದಲೇ ಎಚ್ಚರಿಕೆ ನೀಡಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನ ಗುರಿಯಾಗಿಸಿ ಕ್ಷಿಪಣಿ ದಾಳಿ ( ನಡೆಸುತ್ತಿದೆ. ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಕತಾರ್, ಬಹ್ರೇನ್ ಮತ್ತು ಜೋರ್ಡಾನ್ ಸೇರಿದಂತೆ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ವಾಯುನೆಲೆಗಳು ಮತ್ತು ಮಿಲಿಟರಿ ಸೌಲಭ್ಯಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಇದು ದಾಳಿಗೊಳಗಾದ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನ ಆತಂಕಕ್ಕೆ ದೂಡಿದೆ.
ಜೀವಭಯದಲ್ಲಿ ಲಕ್ಷಾಂತರ ಭಾರತೀಯರು: ಇತೀಚಿನ ಅಂದಾಜಿನ ಪ್ರಕಾರ, ಗಲ್ಫ್ ರಾಷ್ಟ್ರಗಳಲ್ಲಿ 1 ಕೋಟಿಗೂ ಅಧಿಕ ಭಾರತೀಯರು ವಾಸಿಸುತ್ತಿದ್ದಾರೆ. ಈ ಪೈಕಿ ಯುಎಇ ನಲ್ಲಿ 38.9 ಲಕ್ಷ, ಸೌದಿ ಅರೇಬಿಯಾದಲ್ಲಿ 26.5 ಲಕ್ಷ, ಕುವೈತ್‌ನಲ್ಲಿ 10 ಲಕ್ಷ, ಕತಾರ್‌ನಲ್ಲಿ 83 ಲಕ್ಷ, ಒಮನ್‌ನಲ್ಲಿ 66 ಲಕ್ಷ ಮತ್ತು ಬಹ್ರೇನ್‌ನಲ್ಲಿ 33 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ. ಈ ಎಲ್ಲಾ ದೇಶಗಳು ಅಮೆರಿಕ ಮಿಲಿಟರಿ ನೆಲೆಗಳನ್ನು ಹೊಂದಿರುವ ಅಥವಾ ಇರಾನ್ ದಾಳಿಗೆ ಗುರಿಯಾಗಿರುವ ಪ್ರದೇಶಗಳ ವ್ಯಾಪ್ತಿಯಲ್ಲಿವೆ ಎಂದು ವರದಿಗಳು ತಿಳಿಸಿವೆ.
ಯುಎಇ ರಾಜಧಾನಿ ಅಬುಧಾಬಿ ಮೇಲೆ ಇರಾನ್ ಬಾಂಬ್ ದಾಳಿ ನಡೆಸಿದ್ದು, ಭಾರೀ ಸ್ಫೋಟಗಳು ಕೇಳಿಬಂದಿವೆ, ಜೊತೆಗೆ ನಗರದ ಹಲವು ಭಾಗಗಳಲ್ಲಿ ದಟ್ಟ ಹೊಗೆ ಆವರಿಸಿದೆ. ಬಹ್ರೇನ್‌ನಲ್ಲಿರುವ ಯುಎಸ್ ನೌಕಾಪಡೆಯ 5ನೇ ಬೆಟಾಲಿಯನ್ ಸೇವಾ ನೆಲೆಯ ಮೇಲೂ ಕ್ಷಿಪಣಿ ದಾಳಿ ನಡೆಸಿದೆ ಎಂದು ಬಹ್ರೇನ್ ಅಧಿಕಾರಿಗಳು ದೃಢಪಡಿಸಿದ್ದಾರೆ
