ಉದಯವಾಹಿನಿ, ದಕ್ಷಿಣ ಏಷ್ಯಾದ ಹಿಮಾಲಯದ ತಪ್ಪಲಿನಲ್ಲಿರುವ ಪ್ರಮುಖ ಪರ್ವತ ದೇಶ ನೇಪಾಳದಲ್ಲಿ ಜೆನ್-ಜಿಗಳ (ಯುವಪಡೆ) ಪ್ರತಿಭಟನೆ ಬಳಿಕ ಚುನಾವಣೆ ಪರ್ವ ಆರಂಭವಾಗಿದೆ.ರಾಜತಂತ್ರ ವ್ಯವಸ್ಥೆಯಿಂದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮರಳಿದ್ದ ನೇಪಾಳದಲ್ಲಿ ಇತ್ತೀಚೆಗೆ ಜೆನ್-ಜಿಗಳು ಆಡಳಿತ ಸರ್ಕಾರದ ವಿರುದ್ಧ ಭ್ರಷ್ಟಚಾರ, ಸ್ವಜನಪಕ್ಷಪಾತದ ಆರೋಪ ಮಾಡಿ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮ ಆಡಳಿತರೂಢ ಸರ್ಕಾರ ಅಧಿಕಾರ ಕಳೆದುಕೊಂಡಿತ್ತು.
ಚುನಾವಣೆ ಆಯೋಗ ಗಣತಂತ್ರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾರ್ವತ್ರಿಕ ಚುನಾವಣೆಯನ್ನು ಘೋಷಣೆ ಮಾಡಿದೆ. ಮಾರ್ಚ್ 5ರಂದು ಮತದಾನ ನಡೆಯಲಿದ್ದು ಮುಂದಿನ 24 ಗಂಟೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಚುನಾವಣೆ ಆಯೋಗ ತಿಳಿಸಿದೆ.
ನೇಪಾಳ ಫೆಡರಲ್ ಸಂಸತ್ತಿನ ಕೆಳಮನೆಯಾಗಿರುವ ಹೌಸ್ ಆಫ್ ರೆಪ್ರಸೆಂಟೇಟಿವ್‌ಗೆ 275 ಸದಸ್ಯರನ್ನು ಆಯ್ಕೆ ಮಾಡಲು 1.89 ಕೋಟಿ ಮತದಾರರು ಅರ್ಹರಾಗಿದ್ದಾರೆ. ಇಲ್ಲಿನ ರಾಜಕೀಯ ಪಕ್ಷಗಳು ಸಹ ಚುನಾವಣೆ ಎದುರಿಸಲು ಸಜ್ಜುಗೊಂಡಿವೆ.
