ಉದಯವಾಹಿನಿ, ಬಾಂಗ್ಲಾದೇಶ ರಾಜಧಾನಿ ಢಾಕಾದ ಅಗ್ರಗಾಂವ್‌ನಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ. ಬಿಎಂಡಿ ಭೂಕಂಪನ ಕೇಂದ್ರದಿಂದ ನೈಋತ್ಯ ಭಾಗದಲ್ಲಿ ಭೂಕಂಪ ಉಂಟಾಗಿದೆ. ಕೋಲ್ಕತ್ತ ಸೇರಿ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದೆ.

ಭೂಮಿ ಕಂಪಿಸುತ್ತಲೇ ಮನೆಗಳಿಂದ ಜನರು ಹೊರಗೆ ಓಡಿ ಬಂದಿದ್ದಾರೆ. ಕಂಪನದಿಂದಾಗಿ ಮನೆಯೊಳಗಿನ ವಸ್ತುಗಳು ಬೀಳುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
‘ನಾವು ಸೋಫಾದಲ್ಲಿ ಕುಳಿತಿದ್ದಾಗ ಏಕಾಏಕಿ ಕಂಪನದ ಅನುಭವವಾಯಿತು. ನಾವು ಮನೆಯಿಂದ ಹೊರಗೆ ಓಡಿ ಬಂದೆವು. ಸೋಫಾ ಹಾಗೂ ಫ್ಯಾನ್ ಕಂಪಿಸುತ್ತಿತ್ತು. ಟೇಬಲ್ ಮೇಲೆ ಇಟ್ಟಿದ್ದ ಬಾಟಲಿ ಕೆಳಗೆ ಬಿತ್ತು. ನಾವು ನೆಲ ಮಹಡಿಗೆ ಧಾವಿಸಿದೆವು’ ಎಂದು ಕೋಲ್ಕತ್ತ ನಿವಾಸಿ ಸ್ವಾಗತ ಎಂಬವರು ಎಎನ್‌ಐಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!