ಉದಯವಾಹಿನಿ, ಬೆಂಗಳೂರು: ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ನಟ ಸುದೀಪ್ ಸಿನಿಮಾದ ಹಾಡು ಹಾಕಿ ಡಾಗ್ ಸತೀಶ್ ಅವಮಾನಿಸಿದ್ದಾರೆ ಎಂದು ಆರೋಪಿಸಿ ರಜತ್ ಕಿಶನ್ ದೂರು ನೀಡಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸುದೀಪ್ ಅಭಿಮಾನಿಗಳ ಸಂಘದ ಜೊತೆ ಬಂದು ರಜತ್ ಕಿಶನ್, ಧನರಾಜ್ ಸೇರಿ ಡಾಗ್ ಸತೀಶ್ ವಿರುದ್ಧ ದೂರು ನೀಡಿದ್ದಾರೆ.
ಪೊಲೀಸರು ಚೆನ್ನಮ್ಮನ ಅಚ್ಚುಕಟ್ಟು ಠಾಣೆಗೆ ದೂರು ಕೊಡುವಂತೆ ಸೂಚಿಸಿದ್ದಾರೆ. ಕಿಚ್ಚ ಸುದೀಪ್ ಹಾಡನ್ನು ಬೇಕಾಬಿಟ್ಟಿ ಎಡಿಟ್ ಮಾಡಿ, ಶೌಚಾಲಯದ ವಿಡಿಯೋಗೆ ಹಾಕಿದ್ದಾರೆ. ಕೆಲ ಸಂದರ್ಶನದಲ್ಲಿ ಇವರಿಗೆಲ್ಲ ನನ್ನ ನೋಡಿ ಹೊಟ್ಟೆ ಉರಿ, ನನ್ನ ಪಬ್ಲಿಸಿಟಿ ನೋಡಿ ತಡೆಯೋಕೆ ಆಗ್ತಿಲ್ಲ ಅಂತಾ ಹೇಳಿಕೆ ಕೊಟ್ಟಿದ್ದಾರೆ. ರಜತ್‌ನ ನಾನು ಚೆನ್ನಾಗಿ ರೋಸ್ಟ್ ಮಾಡಿದ್ದೇನೆ ಅಂತಾ ಡಾಗ್ ಸತೀಶ್ ಹೇಳಿದ್ದಾರೆ ಎಂದು ಆರೋಪಿಸಿ ವಿಡಿಯೋ ಸಮೇತ ತೋರಿಸಿ, ವೈಯಕ್ತಿಕ ತೇಜೋವಧೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.
