ಉದಯವಾಹಿನಿ, ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಪ್ರತಿಯೊಂದು ಅಪ್‌ಡೇಟ್ ಕೂಡ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸುತ್ತಿದೆ. ಈಗಾಗಲೇ ಬಿಡುಗಡೆಗೊಂಡ ಟೀಸರ್‌ಗಳು ಭಾರಿ ಪ್ರತಿಕ್ರಿಯೆ ಪಡೆದಿದ್ದು, ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ‘ತಬಾಹಿ’ ಎಂಬ ಈ ಗೀತೆ ಮಾರ್ಚ್ 2ರಂದು ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಹಾಡಿನಲ್ಲಿ ನಟ ಯಶ್ ಮತ್ತು ಕಿಯಾರಾ ಅಡ್ವಾಣಿ ರೊಮ್ಯಾಂಟಿಕ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್‌ನಲ್ಲಿ ಯಶ್ ಅವರು ಕಿಯಾರಾ ಅವರನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಅಭಿಮಾನಿಗಳ ಗಮನ ಸೆಳೆದಿದೆ. ಕಿಯಾರಾ ಮುಖವನ್ನು ಮರೆಮಾಡಿರುವುದು ಕುತೂಹಲ ಹೆಚ್ಚಿಸಿದೆ. ಹಾಡು ಹಾಟ್ ಮತ್ತು ಗ್ಲಾಮರಸ್ ಶೈಲಿಯಲ್ಲಿರಲಿದೆ ಎಂಬ ಸುಳಿವು ಸಿಕ್ಕಿದೆ.

ಚಿತ್ರದಲ್ಲಿ ಯಶ್ ಪಾತ್ರಕ್ಕೆ ನೆಗೆಟಿವ್ ಶೇಡ್ ಇರುವ ಸಾಧ್ಯತೆ ಟೀಸರ್ ಮೂಲಕ ಗೊತ್ತಾಗಿದ್ದು, ಹಾಡುಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ‘ತಬಾಹಿ’ಗೆ ವಿಶಾಲ್ ಮಿಶ್ರಾ ಸಂಗೀತ ನೀಡಿದ್ದು, ಚಿತ್ರದ ಇತರೆ ಹಾಡುಗಳಿಗೆ ತನಿಷ್ ಬಾಗ್ನಿ ಅರ್ಸ್ಲಾನ್ ನಿಜಾಮಿ, ಫಹೀಮ್ ಅಬ್ದುಲ್ಲಾ ಹಾಗೂ ರವಿ ಬನ್ನೂರು ಕೂಡ ಕೈಜೋಡಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ರವಿ ಬಸೂರು ನಿಭಾಯಿಸಿದ್ದಾರೆ.’ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಿಸಿರುವ ಈ ಸಿನಿಮಾ ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಬಿಡುಗಡೆಯಲ್ಲೇ ‘ಧುರಂಧರ್ 2’ ಚಿತ್ರದೊಂದಿಗೆ ಪೈಪೋಟಿ ಎದುರಾಗಲಿದೆ.

Leave a Reply

Your email address will not be published. Required fields are marked *

error: Content is protected !!