ಉದಯವಾಹಿನಿ, ನಮ್ಮ ಊಟದಲ್ಲಿ ರಸಂ ಇಲ್ಲದಿದ್ದರೆ ಏನೋ ಕೊರತೆಯಂತೆ ಅನಿಸುತ್ತದೆ. ಸಾಮಾನ್ಯವಾಗಿ ನಾವು ಬೇಳೆ ರಸಂ, ಟೊಮೆಟೊ ರಸಂ, ಮೆಣಸಿನ ರಸಂ ಅಥವಾ ಜೀರಿಗೆ ರಸಂ ತಯಾರಿಸಿ ಸವಿಯುತ್ತೇವೆ. ಆದರೆ ಒಂದು ಬಾರಿ ತೆಂಗಿನ ಹಾಲಿನ ರಸಂ ತಯಾರಿಸಿ ನೋಡಿದರೆ, ಅದೇ ನಿಮ್ಮ ಹೊಸ ಮೆಚ್ಚಿನ ರಸಂ ಆಗುತ್ತದೆ. ಇದು ಕೇವಲ ರುಚಿಯಲ್ಲಿ ಮಾತ್ರವಲ್ಲ, ಮೃದುವಾದ ಕ್ರೀಮಿ ಅಂಶದಿಂದಾಗಿ ಬಾಯಲ್ಲಿ ಕರಗುವಂತೆ ಇರುತ್ತದೆ. ನೀವು ಕೂಡ ಈ ರೀತಿ ರೆಸಿಪಿ ಟ್ರೈ ಮಾಡಿ ನೋಡಿ.
ಈ ತೆಂಗಿನ ಹಾಲು ರಸಂ ಹೊಟ್ಟೆಗೆ ತಂಪು ನೀಡುತ್ತದೆ, ಗಂಟಲು ನೋವಿಗೆ ಉಪಶಮನ ನೀಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ಕೂಡ ಈ ತೆಂಗಿನ ಹಾಲು ರಸಂ ಮಾಡಿ ಸವಿದ್ರೆ ಮತ್ತೆ ಮತ್ತೆ ಮಾಡಿ ತಿನ್ನುವುದು ಗ್ಯಾರಂಟಿ.
ಸ್ಪೆಷಲ್ ತೆಂಗಿನ ಹಾಲು ರಸಂ!
ತೆಂಗಿನ ಹಾಲಿನ ರಸಂ ಕೇರಳ ಮತ್ತು ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಬಹಳ ಜನಪ್ರಿಯ. ಇದನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ಯಾವುದೇ ವಿಶೇಷ ಮಸಾಲೆ ಪುಡಿಗಳು ಬೇಕಿಲ್ಲ. ಮನೆಯಲ್ಲಿರುವ ಸಾಮಾನ್ಯ ಸಾಮಗ್ರಿಗಳಿಂದಲೇ ಈ ಅದ್ಭುತ ರುಚಿಯನ್ನು ಪಡೆಯಬಹುದು. ಬಿಸಿ ಬಿಸಿ ಅನ್ನದ ಜೊತೆಗೆ ಈ ರಸಂ ಸವಿದರೆ ಊಟದ ರುಚಿ ದುಪ್ಪಟ್ಟಾಗುತ್ತದೆ. ಹಾಗಾದ್ರೆ ಈ ರಸಂಗೆ ಬೇಕಾಗುವ ಪದಾರ್ಥಗಳು ಯಾವುವು? ಮಾಡುವುದು ಹೇಗೆ? ಇಲ್ಲಿದೆ ನೋಡಿ.
ತೆಂಗಿನ ಹಾಲಿನ ರಸಂಗೆ ಬೇಕಾಗುವ ಸಾಮಗ್ರಿಗಳು
3-4 ಟೊಮೆಟೊ (ಚಿಕ್ಕ ಚೂರುಗಳಾಗಿ ಕತ್ತರಿಸಿ)
2-3 ಹಸಿ ಮೆಣಸಿನಕಾಯಿ (ಕತ್ತರಿಸಿ)
1 ಚಮಚ ಹುಣಸೆಹಣ್ಣಿನ ರಸ (ಅಥವಾ ತುಂಡು ಹುಣಸೆ)
¼ ಚಮಚ ಅರಿಶಿನ ಪುಡಿ
ರುಚಿಗೆ ತಕ್ಕಷ್ಟು ಉಪ್ಪು
2 ಕಪ್ ನೀರು
1 ಕಪ್ ತಾಜಾ ತೆಂಗಿನ ಹಾಲು (ಒಂದು ತೆಂಗಿನಿಂದ ತಯಾರಿಸಬಹುದು)
2 ಚಮಚ ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಿದ್ದು)
1 ಚಮಚ ಕಾಳುಮೆಣಸು
½ ಚಮಚ ಜೀರಿಗೆ
4-5 ಬೆಳ್ಳುಳ್ಳಿ ಒಡಲುಗಳು
2 ಚಮಚ ತೆಂಗಿನ ಎಣ್ಣೆ
½ ಚಮಚ ಸಾಸಿವೆ
½ ಚಮಚ ಜೀರಿಗೆ (ಒಗ್ಗರಣೆಗೆ)
1-2 ಒಣ ಮೆಣಸಿನಕಾಯಿ
8-10 ಕರಿಬೇವಿನ ಎಲೆಗಳು
ಸ್ವಲ್ಪ ಇಂಗು
