ಉದಯವಾಹಿನಿ, ಬೆಂಗಳೂರು: ಯುಗಾದಿಗೂ ಮುನ್ನ ಕೇತುಗ್ರಸ್ತ ಚಂದ್ರಗ್ರಹಣ ಮಂಗಳವಾರ (ಮಾ.3) ಗೋಚರಿಸಲಿದೆ. ಗ್ರಹಣದ 6 ಗಂಟೆ ಮುಂಚೆಯೇ ಸೂತಕದ ಛಾಯೆ ಆವರಿಸಲಿದೆ. ಹೀಗಾಗಿ ಅಂದು ಬೆಂಗಳೂರಿನ ವಿವಿಧ ದೇವಾಲಯಗಳಲ್ಲಿ  ಪೂಜಾ, ದರ್ಶನದ ಸಮಯ ಬದಲಾಗಿದೆ. ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನಲೆ ಬನಶಂಕರಿ ದೇಗುಲದಲ್ಲಿ ಪೂಜಾ, ದರ್ಶನದ ಸಮಯ ಬದಲಾಗಿದೆ. ಗ್ರಹಣದೋಷಕ್ಕೆ ಯಾವ್ದೇ ವಿಶೇಷ ಪೂಜೆಗಳು ಇರೋದಿಲ್ಲ. ಗ್ರಹಣ ಮುಗಿದ ಮೇಲೆ ಸಂಜೆ 7 ಘಂಟೆಯ ಬಳಿಕ ನಿತ್ಯ ಪೂಜೆ ನಡೆಯಲಿದೆ.

* ಗವಿಗಂಗಾಧರೇಶ್ವರ ದೇವಸ್ಥಾನ
ಅಂದು ಬೆಂಗಳೂರಿನ ಗವಿಗಂಗಾಧರ ದೇಗುಲ ಬೆಳಗ್ಗೆ 9 ಗಂಟೆಗೆ ಬಂದ್ ಆಗಲಿದ್ದು, ಸಂಜೆ 7.45 ರ ಬಳಿಕವೇ ದೇಗುಲ ಒಪನ್ ಆಗಲಿದೆ. ಹೋಳಿ ಹುಣ್ಣಿಮೆಯಂದೇ ಗ್ರಹಣ ಇರುವುದರಿಂದ ಅಗ್ನಿ ಅವಘಡದಂತಹ ಭೀಕರ ಘಟನೆಗಳು ಸಂಭವಿಸಬಹುದು ಎಂದು ಗವಿಗಂಗಾಧರದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ ಅವರು ಮುನ್ಸೂಚನೆ ನೀಡಿದ್ದಾರೆ. ಇನ್ನೂ, ದೇಗುಲದಲ್ಲಿ ಲೋಕಕಲ್ಯಾಣಕ್ಕಾಗಿ ಮಾರ್ಚ್ 4 ರಂದು ಗ್ರಹಣ ಶಾಂತಿ ಹೋಮ ನಡೆಸಲು ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.

* ಕಾಡುಮಲ್ಲೇಶ್ವರ ದೇವಸ್ಥಾನ
ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಗ್ರಹಣ ಸಂಬಂಧ ಪೋಸ್ಟರ್ ಅಂಟಿಸಲಾಗಿದೆ. ಅಂದು ಮಧ್ಯಾಹ್ನ 3.10 ರಿಂದ 6.47 ಚಂದ್ರಗ್ರಹಣ ಹಿನ್ನೆಲೆ ಬೆಳಗ್ಗೆ 11 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುವುದು. ರಾತ್ರಿ 7.30ಕ್ಕೆ ದೇವಾಲಯದ ಬಾಗಿಲು ತೆರೆಯಲಾಗುತ್ತೆ. ಕೆಲ ನಿರ್ಧಿಷ್ಟ ರಾಶಿಯವರು ಗ್ರಹಣದ ಬಳಿಕ ಶಾಂತಿ ಹೋಮ ಮಾಡಿಸಬೇಕೆಂದು ಪೋಸ್ಟರ್‌ನಲ್ಲಿ ತಿಳಿಸಿದ್ದಾರೆ. ಅದಕ್ಕೆಂದೇ ಗ್ರಹಣದ ಮರುದಿನ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ನವಗ್ರಹ ಶಾಂತಿ ಹೋಮ ನಡೆಯಲಿದೆ. ಆ ದಿನ ಅಕ್ಕಿ, ಹುರುಳಿಕಾಳು ದಾನ ನೀಡುವಂತೆ ಭಕ್ತರಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!