ಉದಯವಾಹಿನಿ, ಅಮೆರಿಕ ಮತ್ತು ಇಸ್ರೇಲ್​ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ. 36 ವರ್ಷಗಳ ಇವರ ಆಡಳಿತವು ಕ್ರೌರ್ಯದಿಂದ ಕೂಡಿತ್ತು ಎಂಬುದು ಇತಿಹಾಸ.ಇರಾನ್‌ ಅನ್ನು ದೀರ್ಘಕಾಲ ಆಳಿದ ನಾಯಕರಲ್ಲಿ ಖಮೇನಿ ಕೂಡ ಒಬ್ಬರು. 1979ರಲ್ಲಿ ಇರಾನ್​ ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಿದ ಅಯತೊಲ್ಲಾ ರುಹೊಲ್ಲಾ ಖಮೇನಿ ಅವರಂತೆಯೇ ಅಲಿ ಖಮೇನಿ ಕೂಡ ಪ್ರಭಾವಿ ವ್ಯಕ್ತಿಯಾಗಿದ್ದರು.ಮೂರು ದಶಕಗಳಿಗೂ ಹೆಚ್ಚು ಕಾಲ ಸರ್ವೋಚ್ಚ ನಾಯಕನಾಗಿದ್ದ ಖಮೇನಿ, ದೇಶದ ರಾಜಕೀಯದ ಮೇಲೆ ಬಿಗಿ ಹಿಡಿತ ಹೊಂದಿದ್ದರು. ಆಂತರಿಕ ಭಿನ್ನಾಭಿಪ್ರಾಯ ಉಂಟಾದಾಗ ಅದನ್ನು, ಕಠಿಣ ಕ್ರಮಗಳಿಂದ ದಮನ ಮಾಡುತ್ತಿದ್ದರು. 2025ರ ಡಿಸೆಂಬರ್​​ನಿಂದ 2026ರ ಜನವರಿವರೆಗೆ ನಡೆದ ನಾಗರಿಕ ದಂಗೆಯನ್ನು ಅವರ ಉಳಿವಿಗಾಗಿ ಕ್ರೂರವಾಗಿ ಹತ್ತಿಕ್ಕಿದರು. ಇದರ ಫಲವೇ ಸಾವಿರಾರು ಜನರ ಮಾರಣಹೋಮ.
ಅಲಿ ಖಮೇನಿಯ ಅಧಿಕಾರ ದಾಹ, ದರ್ಪದ ಕಾರಣಕ್ಕಾಗಿ ಹೆಚ್ಚಿನ ಇರಾನಿಯನ್ನರು ಖಮೇನಿಯನ್ನು ತಮ್ಮ ಪ್ರಮುಖ ನಾಯಕ ಎಂದು ಭಾವಿಸುವುದಿಲ್ಲ. ಬದಲಾಗಿ, ಅವರ ಆಡಳಿತದಲ್ಲಿ ದೇಶದ ಎಲ್ಲಾ ರಂಗಗಳು ಅತಿ ದುರ್ಬಲ ಮತ್ತು ತನ್ನ ಪರಂಪರೆಯನ್ನು ಕಳೆದುಕೊಂಡಿತು ಎಂದು ಟೀಕಿಸುತ್ತಾರೆ.
ಖಮೇನಿಯ ಬೆಳವಣಿಗೆ: ಅಲಿ ಖಮೇನಿ 1939ರಲ್ಲಿ ಈಶಾನ್ಯ ಇರಾನ್‌ನ ಮಾರ್ಷದ್ ನಗರದಲ್ಲಿ ಜನಿಸಿದರು. ನಜಾಫ್ ಮತ್ತು ಕೋಮ್‌ನಲ್ಲಿರುವ ಇಸ್ಲಾಮಿಕ್ ಸೆಮಿನರಿಗಳಲ್ಲಿ ಅಧ್ಯಯನ ಮಾಡುವ ವೇಳೆ ರಾಜಕೀಯ ಮತ್ತು ಧಾರ್ಮಿಕ ದೃಷ್ಟಿಕೋನವನ್ನು ಬೆಳೆಸಿಕೊಂಡರು. 13ನೇ ವಯಸ್ಸಿನಲ್ಲಿಯೇ ಕ್ರಾಂತಿಕಾರಿ ಇಸ್ಲಾಂ ವಿಚಾರಗಳನ್ನು ಅನುಸರಿಸಿದರು. ಷಾ ಮೊಹಮ್ಮದ್ ರೆಜಾ ಪಹ್ಲವಿ ಅವರ ಆಳ್ವಿಕೆಯ ವಿರುದ್ಧ ರಾಜಕೀಯ ಹಿಂಸಾಚಾರದಲ್ಲಿ ಭಾಗಿಯಾಗಿದ್ದರು.
1958ರಿಂದ ಖಮೇನಿಸಂ ಸಿದ್ಧಾಂತವನ್ನು ಅನುಸರಿಸಿದರು. 1962 ರಿಂದ 1964 ರವರೆಗೆ ಪಹ್ಲವಿ ಖಮೇನಿ ವಿರುದ್ಧ ಕ್ರಾಂತಿಕಾರಿ ಚಟುವಟಿಕೆಯನ್ನು ಪ್ರಾರಂಭಿಸಿದರು. 1971ರಲ್ಲಿ ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದರು ಎಂದು ಅವರ ಆತ್ಮಚರಿತ್ರೆಗಳಲ್ಲಿ ಬರೆಯಲಾಗಿದೆ. 1976ರ ಇಸ್ಲಾಮಿಕ್ ಕ್ರಾಂತಿಯಲ್ಲಿ ಪಹ್ಲವಿ ಷಾ ಪದಚ್ಯುತಗೊಂಡ ಬಳಿಕ ಗಡೀಪಾರಾಗಿದ್ದ ಅಲಿ ಖಮೇನಿ ಮತ್ತೆ ದೇಶಕ್ಕೆ ಮರಳಿದರು.ಕ್ರಾಂತಿಕಾರಿ ಮಂಡಳಿಗೆ ಸೇರಲು ಖಮೇನಿಯನ್ನು ಆಯ್ಕೆ ಮಾಡಲಾಯಿತು. ನಂತರ ಅವರು ಉಪ ರಕ್ಷಣಾ ಸಚಿವರಾದರು ಮತ್ತು ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಅನ್ನು ಸಂಘಟಿಸಿದರು. ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಸರ್ವೋಚ್ಚ ನಾಯಕನನ್ನು ರಕ್ಷಿಸಲು ಆರಂಭದಲ್ಲಿ ರಚಿಸಲಾದ ಈ ಮಿಲಿಟರಿ ಪಡೆಯು ಈಗ ಇರಾನ್‌ನ ಅತ್ಯಂತ ಶಕ್ತಿಶಾಲಿ ಪಡೆಯಾಗಿ ಬದಲಾಗಿದೆ.1981ರಲ್ಲಿ ಅಲಿ ಖಮೇನಿಯ ಹತ್ಯೆ ಪ್ರಯತ್ನ ನಡೆಯಿತು. ಅದರಲ್ಲಿ ಬದುಕುಳಿದ ನಂತರ 1982ರಲ್ಲಿ ಮತ್ತು 1985ರಲ್ಲಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾದರು. ಇರಾನ್-ಇರಾಕ್ ಯುದ್ಧದ ಬಹುಪಾಲು ವೇಳೆ ಅವರು ಅಧ್ಯಕ್ಷರಾಗಿದ್ದರು.

Leave a Reply

Your email address will not be published. Required fields are marked *

error: Content is protected !!