ಉದಯವಾಹಿನಿ, ಚಿಕ್ಕಮಗಳೂರು: ಪಹಲ್ಗಾಮ್‌ ದಾಳಿಯಾದಾಗ ಸುಮ್ಮನಿದ್ದವ್ರು ಖಮೇನಿ ಹತ್ಯೆಗೆ ಪ್ರತಿಭಟಿಸುತ್ತಿದ್ದಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಇರಾನ್ ಪರಮೋಚ್ಛ ನಾಯಕ ಖಮೇನಿ ಓರ್ವ ರಾಕ್ಷಸ. ಮಹಿಳೆಯರ ಮೇಲೆ ಅತ್ಯಂತ ದೌರ್ಜನ್ಯ ಎಸಗಿದವರ ಪರ ಪ್ರತಿಭಟನೆ ಮಾಡುವವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದರು. ಇದೇ ವೇಳೆ, ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಶಿಯಾ ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದನ್ನು ಅವರು ಖಂಡಿಸಿದ್ದಾರೆ. ಮುಸ್ಲಿಂ ರಾಷ್ಟ್ರಗಳನ್ನು ನೆಮ್ಮದಿಯಿಂದ ಇರಲು ಬಿಡದ ಈ ವ್ಯಕ್ತಿ ಭಾರತದ ಪಾಲಿಗೂ ವಿರೋಧಿ ಆಗಿದ್ದರು. ಕಾಶ್ಮೀರಕ್ಕೆ ಸಂಬಂಧಿಸಿದ ವಿಧಿ 370 ರದ್ದುಪಡಿಸಿದಾಗ ಅದನ್ನು ಬಲವಾಗಿ ವಿರೋಧಿಸಿದ್ದರು. ಇಂತಹ ವ್ಯಕ್ತಿ ಸತ್ತಾಗ ನಮ್ಮ ದೇಶದಲ್ಲಿ ಪ್ರತಿಭಟನೆ ನಡೆಸುವ ಅಗತ್ಯವೇನಿದೆ? ಅವರಿಗೂ ಇಲ್ಲಿನವರಿಗೂ ಏನು ಸಂಬಂಧ ಎಂದು ಅವರು ಪ್ರಶ್ನಿಸಿದ್ದಾರೆ. ಕಾಶ್ಮೀರದ ಪಹಲ್ಗಾಮ್‍ನಲ್ಲಿ 26 ಜನರ ಹೆಣ ಬಿದ್ದಾಗ ಅಥವಾ ದೇಶದ ಜನ ಸತ್ತಾಗ ಮೌನವಾಗಿದ್ದವರು. ಈಗ ಎಲ್ಲಿಯೋ ಸತ್ತ ಕ್ರೂರಿಗಾಗಿ ನಮ್ಮ ದೇಶದ ಅನ್ನ ತಿಂದು ಪ್ರತಿಭಟನೆ ಮಾಡುತ್ತಿರುವುದು ಎಷ್ಟು ಸರಿ?

ಬೆಂಗಳೂರಿನ ಶಾಂತಿನಗರದಲ್ಲಿ ಶಾಸಕ ಹ್ಯಾರಿಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿ, ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆಗೆ ಜಾಗ ನಿಗದಿಯಾಗಿದ್ದರೂ ನಿಯಮ ಮೀರಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಶಿವಮೊಗ್ಗದ ಪ್ರತಿಭಟನೆಯಲ್ಲಿ ಖಮೇನಿಯನ್ನು ಮಹಾತ್ಮ ಗಾಂಧೀಜಿಯವರಿಗೆ ಹೋಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಅಹಿಂಸಾವಾದಿ ಗಾಂಧೀಜಿಯವರಿಗೆ ಹಿಂಸಾವಾದಿ ಖಮೇನಿಯನ್ನು ಹೋಲಿಸುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!