ಉದಯವಾಹಿನಿ, ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾಫಿಯಾದ ಹಾವಳಿ ಮಿತಿಮೀರುತ್ತಿದ್ದು, ಸಿಸಿಬಿ ಮತ್ತು ಸ್ಥಳೀಯ ಪೊಲೀಸರು ಆಗಾಗ್ಗೆ ಮಟ್ಟಹಾಕುವ ಕೆಲಸ ಮಾಡುತ್ತಲೇ ಇದ್ದಾರೆ. ಸಿಸಿಬಿ ನಾರ್ಕೊಟಿಕ್ಸ್ ವಿಭಾಗ ಇಂದು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸಿದೆ.
ಬಾಗಲೂರಿನ ಪ್ರೆಸ್ಟೀಜ್ ಫೈನ್ ಬೇಕರಿ ಪಾರ್ಕ್‌ನ ಫ್ಲಾಟ್‌ವೊಂದರಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್ , ಹೈಡ್ರೋ ಗಾಂಜಾ, ಚರಸ್) ಜಪ್ತಿ ಮಾಡಿದ್ದು, ಕೇರಳ ಮೂಲದ ಇಬ್ಬರನ್ನ ಸಿಸಿಬಿ ನಾರ್ಕೊಟಿಕ್ಸ್ ತಂಡ ಬಂಧಿಸಿದೆ. ಅಶ್ವಿನ್ (27), ಮೊಬಿನಾ (25) ಬಂಧಿತ ಆರೋಪಿಗಳು. ಪೆಡ್ಲಿಂಗ್ ಮಾಡೋದೇ ಇವರ ವೃತ್ತಿ ಬಂಧಿತ ಆರೋಪಿಗಳಿಗೆ ಥೈಲ್ಯಾಂಡ್ ಮೂಲದ ವಿನ್ಸೆಟ್ ಆಗಾಗ್ಗೆ ಫ್ಲೈಟ್‌ನಲ್ಲಿ ಸ್ವಲ್ಪ ಸ್ವಲ್ಪ ಡ್ರಗ್ಸ್ ಕಳಿಸಿಕೊಡ್ತಿದ್ದ. ವಿನ್ಸೆಂಟ್ ಸೂಚಿಸುತ್ತಿದ್ದ ಜಾಗದಲ್ಲಿ ಅಶ್ವಿನ್ ಮತ್ತು ಮೊಬಿನಾ ಡ್ರಗ್ಸ್ ಕೊಟ್ಟು ಬರುತ್ತಿದ್ರು. ಹೀಗೆ ಪೆಡ್ಲಿಂಗ್ ಮಾಡೋದನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಇಬ್ಬರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಫಸ್ಟ್ ಟೈಮ್ 8,335 LSD ಸ್ಟ್ರಿಪ್ಸ್ ಸೀಜ್ : ಇನ್ನೂ ಈ ಕಾರ್ಯಾಚರಣೆಯಲ್ಲಿ ಫಸ್ಟ್ ಟೈಮ್ ಕರ್ನಾಟಕದಲ್ಲಿ 8,335 LSD ಸ್ಟ್ರಿಪ್ಸ್ ಪತ್ತೆಯಾಗಿದ್ದು, ಸಿಸಿಬಿ ಪೊಲೀಸರ ತಂಡ ಜಪ್ತಿ ಮಾಡಿದೆ. 1 ಎಲ್‌ಎಸ್‌ಡಿ ಸ್ಟ್ರಿಪ್ 6,000 ರೂ. ಬೆಲೆ ಬಾಳುತ್ತೆ. ಪೆಡ್ಲರ್‌ಗಳು ದೇವರ ಚಿತ್ರ ಸೇರಿದಂತೆ ವಿವಿಧ ಚಿತ್ರಕಲಾ ರೂಪದಲ್ಲಿ LSD ಸ್ಟ್ರಿಪ್‌ಗಳನ್ನ ಮಾರಾಟ ಮಾಡುತ್ತಿದ್ದರು. ಇದರೊಂದಿಗೆ 534 ಗ್ರಾಂ ಚರಸ್, 5 ಕೆಜಿ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
