ಉದಯವಾಹಿನಿ, ಬೆಂಗಳೂರು: ಇಂದು ರಕ್ತಚಂದ್ರ ಗ್ರಹಣ ಹಿನ್ನೆಲೆ ಬೆಂಗಳೂರಿನ ದೇವಾಲಯಗಳು ಬಂದ್ ಆಗಲಿವೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಎಂದಿನಂತೆ ಪೂಜೆ ಸಲ್ಲಿಕೆಯಾಗಲಿದೆ. ಗ್ರಹಣ ಆರಂಭಕ್ಕೂ ಮುನ್ನ ದೇವಾಲಯಗಳನ್ನ ಕ್ಲೋಸ್ ಮಾಡಲಾಗುತ್ತದೆ, ಈ ಸಮಯದಲ್ಲಿ ಯಾವುದೇ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಗ್ರಹಣ ಮೋಕ್ಷದ ನಂತರ ದೇವಾಲಯ ಶುದ್ಧಿ ಕಾರ್ಯ ಮಾಡಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ.
ಕಾಡು ಮಲ್ಲೇಶ್ವರ ದೇವಸ್ಥಾನ
– ಚಂದ್ರಗ್ರಹದ ದಿನ ಮಧ್ಯಾಹ್ನ 12 ಗಂಟೆಗೆ ದೇವಾಸ್ಥಾನದ ಗರ್ಭಗುಡಿ ದರ್ಬೆಯಿಂದ ಬಂದ್.
– ಸಂಜೆ 7 ಗಂಟೆಗೆ ದೇವಾಸ್ಥಾನದ ಬಾಗಿಲು ತೆಗೆದು, ಪುಣ್ಯಃ,ಶುಚಿತ್ವ..
– ಚಂದ್ರನಿಗೆ ಹಾಗೂ ಕಾಡುಬಮಲ್ಲೇಶ್ವರನಿಗೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ನೈವೇಧ್ಯ.
– ರಾತ್ರಿ 9.30 ರವರೆಗೆ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ.
– ಮರುದಿನ ನವಗ್ರಹ ಶಾಂತಿ ಹೋಮ.
ಬನಶಂಕರಿ ದೇವಾಲಯ
– ಚಂದ್ರಗ್ರಹಣ ದಿನ ಮಧ್ಯಾಹ್ನ 12.30 ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತೆ.
– ಗ್ರಹಣ ನಂತರ ಸಂಜೆ 7 ಗಂಟೆಗೆ ದೇವಸ್ಥಾನದ ಬಾಗಿಲು ತೆಗೆದು ಶುಚಿತ್ವ.
– ಪುಣ್ಯಃ ನಂತರ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ.
* ಗವಿಗಂಗಾಧರ ದೇವಸ್ಥಾನ
– ಮಧ್ಯಾಹ್ನ 12.30 ಕ್ಕೆ ಗರ್ಭಗುಡಿ ಬಂದ್ ಮಾಡಲಾಗುತ್ತೆ.
– ಬೆಳಗ್ಗೆ 9 ಗಂಟೆಗೆ ದೇವಸ್ಥಾನ ಬಂದ್, ಭಕ್ತರಿಗೆ ದರ್ಶನಕ್ಕೂ ಅವಕಾಶವಿಲ್ಲ
– ಸಂಜೆ 7.30 ಕ್ಕೆ ದೇವಸ್ಥಾನದ ಬಾಗಿಲು ಓಪನ್. ಸಂಪೂರ್ಣ ದೇವಸ್ಥಾನ ಶುಚಿ ಮಾಡಲಾಗುತ್ತೆ.
– ಗಬಿಗಂಗಾಧರನಿಗೆ ಕ್ಷೀರಾಭಿಷೇಕಮಾಡಲಾಗುತ್ತೆ.
– ರಾತ್ರಿ 10 ಗಂಟೆವರೆಗೂ ಭಕ್ತರಿಗೆ ಧರ್ಶನಕ್ಕೆ ಅವಕಾಶವಿದೆ.
– ಮರುದಿನ ವಿಷೇಶ ಹೋಮಗಳು ಯಾವುದೂ ಇರಲ್ಲ. ಎಂದಿನಂತೆ ಪೂಜೆ ನಡೆಸಲಾಗುತ್ತೆ.
* ಬಂಡೆ ಮಹಾಕಾಳಿ ದೇವಸ್ಥಾನ
– ಗ್ರಹಣ ದಿನ ಬಂದ್ ಆಗಲ್ಲ ಬಂಡೆಮಹಾಕಾಳಿ ದೇವಸ್ಥಾನ.
– ಚಂದ್ರಗ್ರಹಣದ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ದರ್ಶನಕ್ಕೆ ಅವಕಾಶ.
– ಮಧ್ಯಾಹ್ನ 3 ಗಂಟೆಯಿಂದ ಗ್ರಹಣ ಸಂದರ್ಭ ವಿಶೇಷ ಚಂದ್ರ ಶಾಂತಿ ಹೋಮ.
– ಎಲ್ಲ ಭಕ್ತಿರೂ ಈ ಚಂದ್ರಶಾಂತಿ ಹೋಮದಲ್ಲಿ ಪಾಲ್ಗೊಳ್ಳಲು ಅವಕಾಶ.
– ಗ್ರಹಣ ನಂತರ ಬಂಡೆಮಹಾಕಾಳಿ ಅಮ್ಮನಿಗೆ ಕುಂಭಾಭಿಷೇಕ.
– ರಾತ್ರಿ 10 ಗಂಟೆವರೆಗೆ ದರ್ಶನಕ್ಕೆ ಅವಕಾಶ.
* ಶನಿದೇವರ ದೇವಸ್ಥಾನ
– ಬೆಳಗ್ಗೆಯಿಂದ ಎಂದಿನಂತೆ ದೇವರ ದರ್ಶನಕ್ಕೆ ಅವಕಾಶ.
– ಮಧ್ಯಾಹ್ನ ಮೂರು ಗಂಟೆ ಬಳಿಕ ದರ್ಬೆ ಹಾಕಿ ದೇವಾಲಯ ಬಂದ್.
– ಬುಧವಾರ ಬೆಳಗ್ಗೆ ವರೆಗೂ ದೇವಾಲಯ ಬಂದ್.
– ಬುಧವಾರ ಬೆಳಗ್ಗೆ 5 ಗಂಟೆಯಿಂದ ವಿಶೇಷ ಪೂಜೆ, ಅಭಿಷೇಕ ಆರಂಭ.
– ಬುಧವಾರ ಬೆಳಗ್ಗೆ ಸತ್ಯನಾರಾಯಣ ಸ್ವಾಮಿ ಪೂಜೆ.
* ಅಣ್ಣಮ್ಮ ದೇವಾಲಯ
– ತಾಯಿಗೆ ಪಂಚಾಮೃತ ಅಭಿಷೇಕ ಮಾಡಿ ವಿಶೇಷ ಪೂಜೆ.
– ಮಧ್ಯಾಹ್ನ 3 ಗಂಟೆಯವರೆಗೆ ತಾಯಿಯ ದರ್ಶನಕ್ಕೆ ಭಕ್ತರಿಗೆ ಅವಕಾಶ.
– 3 ಗಂಟೆಯಿಂದ ಸಂಜೆ 7 ರವರಗೆ ದೇವಾಲಯ ಬಂದ್.
– ಗ್ರಹಣ ಮೋಕ್ಷದ ಬಳಿಕ ದೇವಾಲಯ ಶುಚಿ ಮಾಡಿ ಗಂಗಾ ಅಭಿಷೇಕ ಮತ್ತು ಹಾಲಿನ ಅಭಿಷೇಕ.
– 7 ಗಂಟೆಯ ನಂತರ ಮತ್ತೆ ಭಕ್ತರಿಗೆ ದೇವಾಲಯದಲ್ಲಿ ದರ್ಶನಕ್ಕೆ ವ್ಯವಸ್ಥೆ.
