ಉದಯವಾಹಿನಿ, ನವದೆಹಲಿ: ಮಾರ್ಚ್‌ 16 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಮಂಗಳವಾರ 9 ಅಭ್ಯರ್ಥಿಗಳನ್ನ ಘೋಷಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನಬಿನ್‌ ಬಿಹಾರದಿಂದ ಸ್ಪರ್ಧಿಸಲಿದ್ದಾರೆ.
ಬಿಹಾರದಿಂದ ನಿತಿನ್ ನಬಿನ್ ಮತ್ತು ಶಿವೇಶ್ ಕುಮಾರ್, ಅಸ್ಸಾಂ ನಿಂದ ತೇರಶ್ ಗೋವಲ್ಲ ಮತ್ತು ಜೋಗೆನ್ ಮೋಹನ್ ಹಾಗೂ ಛತ್ತೀಸ್‌ಗಢದಿಂದ ಲಕ್ಷ್ಮಿ ವರ್ಮಾ ಅವರನ್ನ ಅಭ್ಯರ್ಥಿಯಾಗಿ ಹೆಸರಿಸಿದೆ.
ಇನ್ನೂ ಹರಿಯಾಣದಿಂದ ಸಂಜಯ್ ಭಾಟಿಯಾ, ಒಡಿಶಾ ದಿಂದ ಸುಜೀತ್ ಕುಮಾರ್ ಜೊತೆಗೆ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಮನಮೋಹನ್ ಸಮಲ್ ಹಾಗೂ ಪಶ್ಚಿಮ ಬಂಗಾಳದಿಂದ ರಾಹುಲ್ ಸಿನ್ಹಾ ಅವರನ್ನ ಚುನಾವಣೆಗೆ ಆಯ್ಕೆ ಮಾಡಿದೆ.

Leave a Reply

Your email address will not be published. Required fields are marked *

error: Content is protected !!