ಉದಯವಾಹಿನಿ, ಟೆಹ್ರಾನ್/ ದುಬೈ: ಆಗ್ನೇಯ ಇರಾನ್‌ನ ವಾಯುನೆಲೆ ಗುರಿಯಾಗಿಸಿಕೊಂಡು ನಡೆಸಿದ ವಾಯುದಾಳಿಯಲ್ಲಿ ಕನಿಷ್ಠ 13 ಇರಾನಿನ ಸೈನಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಿಂದ ಆಗ್ನೇಯಕ್ಕೆ 800 ಕಿಲೋಮೀಟರ್ ದೂರದಲ್ಲಿರುವ ಕೆರ್ಮನ್‌ನಲ್ಲಿ ನಡೆದ ಈ ದಾಳಿಯ ಬಗ್ಗೆ ಅರೆ – ಅಧಿಕೃತ ತಸ್ನಿಮ್ ಸುದ್ದಿ ಸಂಸ್ಥೆ ಮತ್ತು ಹಮ್ಮಿಹಾನ್ ದಿನಪತ್ರಿಕೆ ವರದಿ ಮಾಡಿದೆ.
ಮೆಕ್ಕಾ ಮತ್ತು ಮದೀನಾದಿಂದ ಇರಾನ್ ಯಾತ್ರಿಕರನ್ನು ಹಿಂದಿರುಗಿಸುವ ಕೆಲಸ ಶುರು ಮಾಡಿದ ಸೌದಿ; ಇನ್ನು ಮೆಕ್ಕಾ ಮತ್ತು ಮದೀನಾ ಪವಿತ್ರ ಕ್ಷೇತ್ರಗಳಿಂದ ಇರಾನಿನ ಯಾತ್ರಿಕರನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಸೌದಿಯ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ. ಸೌದಿ ಅರೇಬಿಯಾದ ಇರಾನ್‌ನ ರಾಯಭಾರಿ ಅಲಿರೆಜಾ ಎನಾಯತಿ, ಪ್ರಸ್ತುತ ಮೆಕ್ಕಾ ಮತ್ತು ಮದೀನಾ ನಗರಗಳಲ್ಲಿರುವ 9,000 ಇರಾನಿನ ಜನರನ್ನು ಹಿಂದಿರುಗಿಸುವ ಪ್ರಕ್ರಿಯೆಯನ್ನು ಸೋಮವಾರದಿಂದ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಇರಾನ್‌ನ ಸುದ್ದಿ ಸಂಸ್ಥೆಯೊಂದು ನೀಡಿರುವ ವರದಿಯೊಂದು, 2025 ರಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ 12 ದಿನಗಳ ಯುದ್ಧದಂತೆಯೇ ಈಗಲೂ ಆಗುತ್ತಿದೆ ಎಂದು ತಿಳಿದು ಬಂದಿದೆ. ಇರಾನಿನ ಯಾತ್ರಿಕರು ಸೌದಿ – ಇರಾಕಿ ಗಡಿ ದಾಟುವ ಮೂಲಕ ಸೌದಿ ಅರೇಬಿಯಾವನ್ನು ತೊರೆದು ಇರಾಕ್‌ನಿಂದ ಇರಾನ್‌ಗೆ ಹಿಂತಿರುಗುತ್ತಿದ್ದಾರೆ. ಮುಸ್ಲಿಂ ಪವಿತ್ರ ರಂಜಾನ್ ಮಾಸ ಮತ್ತು ಇರಾನ್ ಸೌದಿ ಅರೇಬಿಯಾದಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಅಷ್ಟೇ ಅಲ್ಲ ಈ ದೇಶಗಳ ಇತರ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸೌದಿಯಿಂದ ಈ ಘೋಷಣೆ ಹೊರ ಬಿದ್ದಿದೆ.
ಮಧ್ಯಪ್ರಾಚ್ಯ ಪ್ರಕ್ಷುಬ್ಧತೆ: ಬ್ರೆಂಟ್ ಕಚ್ಚಾ ತೈಲದಲ್ಲಿ ಶೇ 4ರಷ್ಟು ಏರಿಕೆ: ಮಧ್ಯಪ್ರಾಚ್ಯದಲ್ಲಿನ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಮಂಗಳವಾರದ ವ್ಯಾಪಾರದಲ್ಲಿ ಬ್ರೆಂಟ್ ಕಚ್ಚಾ ತೈಲವು ಶೇ 4ಕ್ಕಿಂತ ಹೆಚ್ಚು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 81 ಡಾಲರ್ಗೆ ಏರಿಕೆ ಆಗಿದೆ. ಬೆಳಗಿನ ವ್ಯವಹಾರದಲ್ಲಿ ಬ್ರೆಂಟ್ ಪ್ರತಿ ಬ್ಯಾರೆಲ್‌ಗೆ 4.41 ಪ್ರತಿಶತದಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ $81.17 ಕ್ಕೆ ವಹಿವಾಟು ನಡೆಸುತ್ತಿತ್ತು. ಇನ್ನು ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ 3.99 ಪ್ರತಿಶತದಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ $74.07 ಕ್ಕೆ ವಹಿವಾಟು ನಡೆಸುತ್ತಿತ್ತು ಎಂದು ಎಎಫ್‌ಪಿ ವರದಿ ಮಾಡಿದೆ.
