ಉದಯವಾಹಿನಿ, ಬೆಂಗಳೂರು: ನಾಡಿನಾದ್ಯಂತ ಬಣ್ಣದ ಹಬ್ಬ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಯುವಕ ಯುವತಿಯರು, ಚಿಣ್ಣರು ಬಣ್ಣದೋಕುಳಿಯಲ್ಲಿ ಮಿಂದೆದ್ದಿದ್ದಾರೆ. ಹೋಳಿಯಾಟದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದ್ದಾರೆ. ಗಲ್ಲಿ, ಗಲ್ಲಿಗಳಲ್ಲಿ ರೇನ್ ಡಾನ್ಸ್ ಹಾಗೂ ಡಿಜೆ ಸೌಂಡ್‌ಗೆ ಹೆಜ್ಜೆ ಹಾಕಿ ಕುಣಿದಿದ್ದಾರೆ. ದಾವಣಗೆರೆಯಲ್ಲಿ ಅದ್ದೂರಿಯಾಗಿ ಹೋಳಿ ಆಚರಣೆ ಮಾಡಲಾಯ್ತು. ನಗರದ ಎಲ್ಲಾ ಕಡೆ ಯುವ ಸಮೂಹ ಬಣ್ಣದೋಕುಳಿಯಲ್ಲಿ ಮಿಂದೆದ್ರು. ರಾಮ್ ಅಂಡ್ ಕೋ ಸರ್ಕಲ್‌ನಲ್ಲಿ ಸಾವಿರಾರು ಯುವಕ ಯುವತಿಯರಿಂದ ಡಿಜೆ ಮ್ಯುಸಿಕ್‌ಗೆ ಹೆಜ್ಜೆ ಹಾಕಿದ್ರು. ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ್ರು.

ವಿದ್ಯಾಕಾಶಿ ಧಾರವಾಡದಲ್ಲಿ ಹೋಳಿ ಹಬ್ಬ ಆಚರಣೆ ಸಂಭ್ರಮ ಜೋರಾಗಿದೆ. ಹಬ್ಬದ ಆಚರಣೆಯ ಸಂಭ್ರಮದಲ್ಲಿ ಮಿಂದೆದ್ದ ಯುವಕರು ಯುವತಿಯರು ಡಿಜೆ ಸೌಂಡಿಗೆ ಹೆಜ್ಜೆ ಹಾಕಿದ್ದಾರೆ. ಶಾಸಕ ಅರವಿಂದ ಬೆಲ್ಲದ್ ಗೆಳೆಯರ ಬಳಗ, ಶಾಸಕ ವಿನಯ ಕುಲಕರ್ಣಿ ಬೆಂಬಲಿಗರಿಂದ ನಗರದ ಬೇರೆ ಬೇರೆ ಕಡೆ ರೆನ್ ಡಾನ್ಸ್ ಆಯೋಜನೆ ಮಾಡಲಾಗಿತ್ತು. ಡಿಜೆ ಸೌಂಡಿಗೆ ರೆನ್ ಡಾನ್ಸ್ ಮಾಡುತ್ತ ಯುವಕ ಯುವತಿಯರು ಸಂಭ್ರಮಪಟ್ಟರು. ಇನ್ನು ಕೊಪ್ಪಳದಲ್ಲೂ ಬಣ್ಣದ ಹಬ್ಬದ ಸಂಭ್ರಮ ಜೋರಾಗಿತ್ತು. ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ ಹೋಳಿ ರಂಗಿನಾಟದಲ್ಲಿ ಯುವಕ, ಯುವತಿಯರು ಪಾಲ್ಗೊಂಡು ಸಂಭ್ರಮಿಸಿದ್ರು. ರೇನ್ ಡ್ಯಾನ್ಸ್, ಡಿಜೆ ಸೌಂಡ್ ಮೇಳೈಸಿತ್ತು. ವಿಜಯಪುರದಲ್ಲಿ ರಂಗಿನ ಹಬ್ಬ ಹೋಳಿಯ ಸಂಭ್ರಮ ಮನೆಮಾಡಿದೆ. ಗಲ್ಲಿ, ಗಲ್ಲಿಗಳಲ್ಲಿ ರೇನ್ ಡಾನ್ಸ್ ಹಾಗೂ ಡಿಜೆ ಸದ್ದು ಕಂಡು ಬಂತು. ವಿಜಯಪುರ ನಗರದ ಶಾರದಾ ಕಾಲೋನಿಯಲ್ಲಿ ರೇನ್ ಡಾನ್ಸ್ಗೆ ಚಿಕ್ಕ ಮಕ್ಕಳು, ಯುವಕರು ಕುಣಿದು ಕುಪ್ಪಳಿಸಿದರು. ಬಡವಾಣೆಯ ಜನರು ಹೋಳಿ ಹಬ್ಬದಲ್ಲಿ ಮಿಂದೆದ್ದರು.

Leave a Reply

Your email address will not be published. Required fields are marked *

error: Content is protected !!