ಉದಯವಾಹಿನಿ, ಬೆಂಗಳೂರು: ಕೆಪಿಎಸ್‌ಸಿ ಎಕ್ಸಾಂನಲ್ಲಿ ಮತ್ತೆ ಅಕ್ರಮದ ಆರೋಪ ಕೇಳಿ ಬಂದಿದೆ. 384 ಗೆಜೆಟೆಡ್ ಹುದ್ದೆಗೆ ಇಂಟರ್‌ವ್ಯೂಗೆ ಕರೆದಿರೋ ಪಟ್ಟಿಯಲ್ಲಿ ಅಕ್ರಮ ಆಗಿದೆ ಎಂದು ಅಭ್ಯರ್ಥಿಗಳು ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ ಆಗಬೇಕು ಅಂತ ಆಗ್ರಹಿಸಿದ್ದಾರೆ.

ಗೊಂದಲ, ಗಲಾಟೆಗಳ ಮಧ್ಯೆ ಪ್ರಾರಂಭ ಆಗಿದ್ದ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಯಲ್ಲಿ ಮತ್ತೆ ಅಕ್ರಮ ಆರೋಪ ಕೇಳಿಬಂದಿದೆ. ಮುಖ್ಯ ಪರೀಕ್ಷೆ ಮುಗಿದ ಬಳಿಕ ಇಂಟರ್‌ವ್ಯೂಗೆ 1:3 ಅನುಪಾತದ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಕ್ರಮ ಆರೋಪ ಕೇಳಿಬಂದಿದೆ. ಮಾ.2ರಂದು ಕೆಪಿಎಸ್‌ಸಿ 1:3 ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಂದೇ ಕೊಠಡಿಯಲ್ಲಿ ಎಕ್ಸಾಂ ಬರೆದ ಅಭ್ಯರ್ಥಿಗಳೇ ಹೆಚ್ಚು ಇದ್ದಾರೆ. ಇದರಲ್ಲಿ ಅಕ್ರಮ ಆಗಿದೆ ಅಂತ ಅಭ್ಯರ್ಥಿಗಳು ಆರೋಪ ಮಾಡಿದ್ದು, ತನಿಖೆಗೆ ಆಗ್ರಹ ಮಾಡಿದ್ದಾರೆ.
ಕೆಪಿಎಸ್‌ಸಿ ಎಕ್ಸಾಂ ಸಂಬಂಧ ಈ ಆರೋಪ ಇದೇ ಮೊದಲಲ್ಲ. ಇದೇ ಪರೀಕ್ಷೆಯಲ್ಲಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಲೋಪ ಆಗಿತ್ತು. ದೊಡ್ಡ ವಿರೋಧಗಳು ಬಂದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಎರಡು ಬಾರಿ ಪರೀಕ್ಷೆ ನಡೆಸಲಾಗಿತ್ತು. ಈಗ ಸಂದರ್ಶನಕ್ಕೆ ಅರ್ಹತೆ ಪಡೆದ ಪಟ್ಟಿಯಲ್ಲಿ ಅಕ್ರಮ ಅಂತ ಹೇಳಲಾಗ್ತಿದೆ. ಜೊತೆಗೆ ಇಡೀ ಪರೀಕ್ಷೆ ಪ್ರಕ್ರಿಯೆಯೇ ಅಕ್ರಮ ಅಂತ ಆರೋಪ ಮಾಡಲಾಗ್ತಿದೆ.

ಕೆಪಿಎಸ್‌ಸಿ ಪರೀಕ್ಷಾ ಅಕ್ರಮದ ಬಗ್ಗೆ ಬಿಜೆಪಿ ಕೂಡಾ ಧ್ವನಿ ಎತ್ತಿದೆ. ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡೋದಾಗಿ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ತಿಳಿಸಿದ್ದಾರೆ. ಪ್ರತಿ ಪರೀಕ್ಷೆಯಲ್ಲೂ ಕೆಪಿಎಸ್‌ಸಿಯಲ್ಲಿ ಇಂತಹ ಗೊಂದಲಗಳೇ ಕೇಳಿ ಬರ್ತಿದೆ. ಈವರೆಗೂ ಅಕ್ರಮದ ಬಗ್ಗೆ ಕೆಪಿಎಸ್‌ಸಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ತನಿಖೆ ಆಗುತ್ತಾ ಎಂದು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!