ಉದಯವಾಹಿನಿ, ಥೈಲ್ಯಾಂಡ್ : ಥೈಲ್ಯಾಂಡ್​​ನಲ್ಲಿ ನಡೆದ ಈ ವಿವಾಹವು ಕುತೂಹಲದ ಜತೆ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಥೈಲ್ಯಾಂಡ್​ನ ಮಹಿಳೆಯೊಬ್ಬರು ಆಸ್ಟ್ರೇಲಿಯಾದ ಇಬ್ಬರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾರೆ. ವಿವಾಹ ಕಾರ್ಯಕ್ರಮ ಸಾಧಾರಣವಾಗಿದ್ದರೂ ಆಕೆಗೆ ವರರ ಕಡೆಯಿಂದ 29 ಲಕ್ಷ ರೂ. ವಧುದಕ್ಷಿಣೆಯಾಗಿ ಬಂದಿದೆ. 37 ವರ್ಷ ವಯಸ್ಸಿನ ಥಾಯ್ ಮಹಿಳೆ ಡುವಾಂಗ್ಡುವಾನ್ ಕೆಟ್ಸಾರೊ ಎಂಬಾಕೆ ಇಬ್ಬರು ಆಸ್ಟ್ರಿಯನ್ ಪುರುಷರನ್ನು ಒಂದೇ ಮಂಪಟದಲ್ಲಿ ವಿವಾಹವಾಗಿದ್ದಾರೆ.

ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಕರಾವಳಿ ಥಾಯ್ ನಗರವಾದ ಪಟ್ಟಾಯದಲ್ಲಿ ಕೆಲಸ ಮಾಡುತ್ತಿದ್ದಾಗ ಡುವಾಂಗ್ಡುವಾನ್ ಆಸ್ಟ್ರಿಯಾದ ನಿವೃತ್ತ ಪೊಲೀಸ್ ಅಧಿಕಾರಿ ರೋಮನ್ ಅವರನ್ನು ಮೊದಲು ಭೇಟಿಯಾದರು.

ಕಾಲಾನಂತರದಲ್ಲಿ, ಅವರ ಸಂಬಂಧವು ಬಲವಾಯಿತು ಮತ್ತು ಇಬ್ಬರು ಸುಮಾರು ಐದು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಆಕೆ ಆಸ್ಟ್ರಿಯಾದ ಮತ್ತೊಬ್ಬ ಪೊಲೀಸ್ ಅಧಿಕಾರಿ ಮ್ಯಾಕಿಯನ್ನು ಭೇಟಿಯಾಗಿದ್ದಳು, ಕ್ರಮೇಣವಾಗಿ ಈ ವಿಚಾರ ಮೊದಲು ಇಷ್ಟಪಟ್ಟಿದ್ದ ವ್ಯಕ್ತಿಗೆ ತಿಳಿಯಿತು ಆದರೆ ಯಾರೂ ಜಗಳವಾಡದೆ ಮೂವರು ಒಟ್ಟಿಗೆ ಇರಲು ನಿರ್ಧರಿಸಿದರು. ಮದುವೆ ಬಗ್ಗೆ ಮಾತನಾಡುವ ಮೊದಲು ತನ್ನ ಕುಟುಂಬಕ್ಕೆ ಈ ಬಗ್​ಗೆ ತಿಳಿಸಿದ್ದಾಳೆ, ತನ್ನ ಪೋಷಕರು ಮತ್ತು ಮಕ್ಕಳೊಂದಿಗೆ ಈ ವಿಚಾರ ಕುರಿತು ಮಾತನಾಡಿದಳು. ಡುವಾಂಗ್ಡುವಾನ್ ಮೂರು ಹೆಣ್ಣುಮಕ್ಕಳ ತಾಯಿ ಮತ್ತು ವರ್ಷಗಳ ಹಿಂದೆ ಕೊನೆಗೊಂಡ ಹಿಂದಿನ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!