ಉದಯವಾಹಿನಿ, ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ದಾಳಿ ಮಾಡುತ್ತಿದ್ದು ದಿನದಿಂದ ದಿನಕ್ಕೆ ಘರ್ಷಣೆ ತೀವ್ರಗೊಳ್ಳುತ್ತಿದೆ. ಅಲ್ಲಿನ ಜನರಲ್ಲಿ ಭಯ, ಆತಂಕ ಕಾಡುತ್ತಿದೆ. ಇಂತಹದ ಮಧ್ಯೆಯೂ ಫುಟ್ಬಾಲ್ ಆಟಗಾರರು ತಮ್ಮ ದೇಶದ ರಾಷ್ಟ್ರಗೀತೆ ಆಡಲು ಹಿಂದೇಟು ಹಾಕಿ ಮೌನ ಪ್ರತಿಭಟನೆ ಮಾಡಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಮಹಿಳಾ ಫುಟ್ಬಾಲ್ ಆಟಗಾರ್ತಿಯರು ರಾಷ್ಟ್ರಗೀತೆ ಆಡದೇ ಮೌನ ಪ್ರತಿಭಟನೆ ಮಾಡಿದರು.
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನ Cbus ಸೂಪರ್ ಸ್ಟೇಡಿಯಂನಲ್ಲಿ ವುಮೆನ್ಸ್ ಏಷ್ಯಾ ಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಇರಾನ್ ಹಾಗೂ ದಕ್ಷಿಣ ಕೊರಿಯಾ ಮುಖಾಮುಖಿಯಾಗಿವೆ. ಪಂದ್ಯ ಆರಂಭಕ್ಕೂ ಮೊದಲು ಸ್ಟೇಡಿಯಂ ಸ್ಪೀಕರ್‌ಗಳಲ್ಲಿ ಇರಾನ್ ದೇಶದ ರಾಷ್ಟ್ರಗೀತೆಯ ಮ್ಯೂಸಿಕ್ ಅನ್ನು ಹಾಕಲಾಗಿತ್ತು. ಆದರೆ ಈ ವೇಳೆ ಇರಾನ್ನ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯರು ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದು ಹೇಳಲಾಗಿದೆ.

ಸ್ಟೇಡಿಯಂ ಸ್ಪೀಕರ್‌ಗಳಲ್ಲಿ ಇರಾನ್ ದೇಶದ ರಾಷ್ಟ್ರಗೀತೆಯ ಮ್ಯೂಸಿಕ್ ಪ್ಲೇ ಅಗುತ್ತಿದ್ದರೂ ಇರಾನ್‌ ಮಹಿಳಾ ಫುಟ್ಬಾಲ್ ಆಟಗಾರ್ತಿಯರು, ಮುಖ್ಯ ಕೋಚ್ ಮಾರ್ಜಿಯೆಹ್ ಜಾಫಾರಿ ಅವರು ರಾಷ್ಟ್ರಗೀತೆ ಹಾಡದೇ ಮುಂದೆ ನೋಡುತ್ತ ನಿಂತರು ಅಷ್ಟೇ. ಇಸ್ರೇಲ್ ಹಾಗೂ ಅಮೆರಿಕ ದಾಳಿಯಿಂದ ಇರಾನ್‌ನ ಅಧ್ಯಕ್ಷ ಖಮೇನಿ ಮೃತಪಟ್ಟ ಬಳಿಕ ಮೌನ ಪ್ರತಿಭಟನೆ ನಡೆಸಲಾಗುತ್ತಿದೆ. ಮಾಧ್ಯಮಗಳ ಜೊತೆ ಮಾತನಾಡಿದ ಇರಾನ್ ತಂಡದ ನಾಯಕಿ ಜಹಾ ಘನ್ಸರಿ ಅವರು ಖಮೇನಿ ಸಾವಿನ ಬಗ್ಗೆ ಉತ್ತರಿಸಲು ನಿರಾಕರಣೆ ಮಾಡಿದರು. ಈ ಬಗ್ಗೆ ಯಾವುದೇ ಪ್ರಶ್ನೆಗಳು ಬೇಡ, ಕೇವಲ ಆಟದ ಕಡೆಗೆ ಗಮನ ಹರಿಸೋಣ ಎಂದು ಹೇಳಿದರು. ಖಮೇನಿ ಅವರ ಕುರಿತು ಮಾತನಾಡಲು ಕೋಚ್, ಸಿಬ್ಬಂದಿ, ಆಟಗಾರ್ತಿಯರು ಹಿಂದೇಟು ಹಾಕಿದರು.

Leave a Reply

Your email address will not be published. Required fields are marked *

error: Content is protected !!