
ಉದಯವಾಹಿನಿ ಕುಶಾಲನಗರ:-ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ (ರಿ) ಕೊಡಗು ಜಿಲ್ಲಾ ಘಟಕ ಕುಶಾಲನಗರ ಪ್ರೆಸ್ ಕ್ಲಬ್ (ರಿ)
ಸಂಗಮ ಟಿವಿ ಮತ್ತು ವಂಶಿ ನ್ಯೂಸ್ ಸಹಯೋಗದೊಂದಿಗೆ
ಪತ್ರಿಕ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ತಾರೀಕು 31ರಂದು ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಎಂದು ಸಂಘದ ಅಧ್ಯಕ್ಷ ಡಾ.ಎಚ್.ಎಂ. ರಘು ಕೋಟಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ದಿನಾಂಕ 31ರಂದು ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಡಾ.ಹೆಚ್ ಎಂ ರಘು ಕೋಟಿ ರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸಲಿದ್ದು. ವಿಶೇಷ
ಆಹ್ವಾನಿತರಾಗಿ ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್ ಗೌಡ ಉಪಸ್ಥಿತರಿದ್ದು ಮಾಜಿ ಶಾಸಕರಾದ ಅಪ್ಪಚ್ಚು ರಂಜನ್
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ ಮುಖ್ಯ ಅತಿಥಿಗಳಾಗಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆಪಿ ಚಂದ್ರಕಲಾ ತಹಸೀಲ್ದಾರ್ ಟಿ.ಎಂ ಪ್ರಕಾಶ್ ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರ ಬಾಬು ಪುರಸಭಾ ಸದಸ್ಯರಾದ ಪ್ರಮೋದ್ ಮುತ್ತಪ್ಪ ಅಮೃತ್ ರಾಜ್ ಹಿಂದು ಮಲಯಾಳಿ ಸಂಘದ ಅಧ್ಯಕ್ಷ ವಿಎಂ ವಿಜಯ್ ಮತ್ತು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ದಾಮೋದರ ಭಾಗವಹಿಸಲಿದ್ದು ಬಿ.ಟಿವಿ ವರದಿಗಾರ ಸುಜಿತ್ ಕುಮಾರ್ ಕುಮಾರ್ ಸಹ. ಶಿಕ್ಷಕ ಹೆಚ್.ಈ ರಮೇಶ್. ಸಂಚಾರಿ ಪೊಲೀಸ್ ಕೆ.ಕೆ ಸ್ವಾಮಿ ಸೇರಿದಂತೆ 16 ಮಂದಿ ಪ್ರತಿಭಾ ಪುರಸ್ಕಾರ ಸ್ವೀಕರಿಸಲಿದ್ದಾರೆ.
