ಉದಯವಾಹಿನಿ, ಬೆಂಗಳೂರು: ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದಿಂದ ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬಳ್ಳಾರಿಯ 35 ಮಂದಿ ಹಾಗೂ ಚಿತ್ರದುರ್ಗ 15 ಮಂದಿ ಸೇರಿ 246 ಕನ್ನಡಿಗರು ಮಾ.4 ರಂದು ಶಾರ್ಜಾ ದಿಂದ ಕೊಚ್ಚಿನ್‍ಗೆ ಬಂದಿಳಿದಿದ್ದರು. 50 ಮಂದಿಗೆ ಅಲ್ಲಿಂದ ಬೆಂಗಳೂರಿಗೆ ಶಾಸಕ ಬಿ ನಾಗೇಂದ್ರ ಅವರು ವಿಮಾನದ ವ್ಯವಸ್ಥೆ ಮಾಡಿದ್ದರು. ಇಂದು ಬೆಳಗ್ಗೆ (ಮಾ.5) ಅವರೆಲ್ಲ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಕೊಚ್ಚಿನ್‍ನಿಂದ ಬೆಂಗಳೂರಿಗೆ ಬಂದಿಳಿದ ಕನ್ನಡಿಗರನ್ನು ನಾಗೇಂದ್ರ ಅವರು ಬರಮಾಡಿಕೊಂಡಿದ್ದಾರೆ. ಶಾಸಕರ ಸಹಾಯವನ್ನು ಕನ್ನಡಿಗರು ಕೊಂಡಾಡಿದ್ದಾರೆ. ಸುರಕ್ಷಿತವಾಗಿ ಸ್ವದೇಶಕ್ಕೆ ವಾಪಸ್ಸಾಗಿದ್ದಕ್ಕೆ ಕನ್ನಡಿಗರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!