ಉದಯವಾಹಿನಿ, ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣದಿಂದಾಗಿ ಪ್ರಮುಖ ತೈಲ ಪೂರೈಕೆ ಮಾರ್ಗ ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದು ಭಾರತೀಯ ಸರಕು ಸಾಗಣೆ ವಲಯಕ್ಕೆ ಆರ್ಥಿಕ ಅಪಾಯ ತಂದೊಡ್ಡಿದೆ. 27 ಭಾರತೀಯ ಹಡಗುಗಳು ಹಾರ್ಮುಜ್‌ ಜಲಸಂಧಿ ಪ್ರದೇಶದಲ್ಲೇ ಸಿಲುಕಿಕೊಂಡಿದ್ದು, 10,000 ಕೋಟಿಗೂ ಅಧಿಕ ಮೌಲ್ಯದ ಸರಕು ಅಪಾಯದಲ್ಲಿವೆ. ಈ ಮಧ್ಯೆ ಭಾರತದ ಬಾಸ್ಮತಿ ಅಕ್ಕಿ ರಫ್ತುದಾರರೂ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಅಮೆರಿಕ ಮತ್ತು ಇಸ್ರೇಲ್‌ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್‌ ಅಮೆರಿಕದ ಸೇನಾ ನೆಲೆಗಳಿರುವ ಕೊಲ್ಲಿದೇಶಗಳನ್ನ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಇದು ಭಾರತದ ಅಕ್ಕಿ ರಫ್ತುದಾರರಿಗೆ ದೊಡ್ಡ ಹೊಡೆತ ಕೊಟ್ಟಿದೆ. 2 ಲಕ್ಷ ಟನ್‌ ಅಕ್ಕಿಯನ್ನ ಹೊತ್ತ ಸಾವಿರಾರು ಕಂಟೇನರ್‌ಗಳು ಬಂದರಿನಲ್ಲೇ ಲಾಕ್‌ ಆಗಿವೆ. ಈ ಕುರಿತು ಇನ್ನಷ್ಟು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ… ಮಾರ್ಚ್‌ 1 ರಿಂದ ಪಶ್ಚಿಮ ಏಷ್ಯಾದಲ್ಲಿ ಶುರುವಾದ ಸಂಘರ್ಷವು 6ನೇ ದಿನಕ್ಕೆ ಕಾಲಿಡುತ್ತಿದೆ. ಇದರಿಂದ ಗಲ್ಫ್‌ ಪ್ರದೇಶಳ ಆಮದುರಾರರಿಂದ ಪಾವತಿಗಳ ಅನಿಶ್ಚಿತತೆ ಎದುರಿಸುವಂತಾಗಿದೆ. ಜೊತೆಗೆ ಸಾವಿರಾರು ಕಂಟೇನರ್‌ಗಳು ಬಂದರಿನಲ್ಲೇ ಸಿಲುಕಿದ್ದು (Containers Stuck In Port), ಭಾರತೀಯ ರಫ್ತುದಾರು ಡೆಮುರೇಜ್ ಶುಲ್ಕಗಳ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಡೇಮುರೇಜ್‌ ಶುಲ್ಕ ಅಂದ್ರೆ ಆಮದುದಾರರು ಬಂದರಿನಲ್ಲಿ ʻನಿಗದಿತ ಉಚಿತʼ ದಿನಗಳನ್ನು ಮೀರಿದ ನಂತರ ತಮ್ಮ ಸರಕು ಅಥವಾ ಕಂಟೇನರ್‌ಗಳನ್ನು ತೆರವುಗೊಳಿಸುವಲ್ಲಿ ವಿಫಲವಾದ್ರೆ ಶಿಪ್ಪಿಂಗ್ ಲೈನ್ ಅಥವಾ ಬಂದರು ಅಧಿಕಾರಿಗಳಿಗೆ ಪಾವತಿಸಬೇಕಾದ ದಂಡದ ಮೊತ್ತವಾಗಿದೆ. ಇದು ಸರಕುಗಳ ವಿಳಂಬಕ್ಕೆ ವಿಧಿಸಲಾಗುವ ಹೆಚ್ಚುವರಿ ಸಂಗ್ರಹಣಾ ವೆಚ್ಚವಾಗಿದ್ದು, ದಿನಕ್ಕೆ ಪ್ರತಿ ಕಂಟೇನರ್‌ಗೆ ಸರಾಸರಿ 4,500 ರೂ. ನಿಂದ 13,000 ರೂ.ವರೆಗೆ ಇರುತ್ತದೆ.

Leave a Reply

Your email address will not be published. Required fields are marked *

error: Content is protected !!