ಉದಯವಾಹಿನಿ ಕುಶಲನಗರ :-ಸಾರ್ವಜನಿಕರಿಗೆ ತೊಂದರೆ ಮಾಡದೆ ಜನರ ಕಷ್ಟಗಳನ್ನು ನಿವಾರಿಸಲು ಎಲ್ಲಾ ಹಂತದ ಅಧಿಕಾರಿಗಳು ಜವಾಬ್ದಾರಿಯುತ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಹೇಳಿದ್ದಾರೆ.
ಮಡಿಕೇರಿ ತಾಲ್ಲೂಕಿನ ಸಂಪಾಜೆಯಲ್ಲ  ನೂತನವಾಗಿ ನಿರ್ಮಿಸಿರುವ ನಾಡ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆ ಜೊತೆ ಸಾರ್ವಜನಿಕರು ನೇರ ಸಂಪರ್ಕ ಹೊಂದಿದ್ದು, ಸರ್ಕಾರದ ಹಲವು ಯೋಜನೆಗಳ ಪ್ರಮಾಣ ಪತ್ರಕ್ಕೆ ನಾಡ ಕಚೇರಿಗೆ ಆಗಮಿಸುತ್ತಾರೆ. ಆದ್ದರಿಂದ ನಾಗರಿಕರನ್ನು ಸತಾಯಿಸದೆ ಸ್ಪಂದಿಸುವAತಾಗಬೇಕು ಎಂದು ಶಾಸಕರು ನುಡಿದರು.
ಕಂದಾಯ ಇಲಾಖೆ ಜನರಿಗೆ ನೇರವಾಗಿ ಸ್ಪಂದಿಸಬೇಕು ಸರ್ವೆ ಹಾಗೂ ಇನ್ನಿತರ ದಾಖಲೆಗಳನ್ನು ಜನರಿಗೆ ಕಾಲಮಿತಿಯಲ್ಲಿ ನೀಡಬೇಕು. ಸಂಪಾಜೆಗೆ ಹೊಸ ನಾಡ ಕಚೇರಿ ಕಟ್ಟಡ ಕಲ್ಪಿಸಿದ್ದು, ಜನರು ಹಾಗೂ ಅಧಿಕಾರಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು, ಜನ ಸೇವೆ ಅತಿ ಮುಖ್ಯವಾಗಿದ್ದು, ಜನರಿಗೆ ಕಂದಾಯ ಇಲಾಖೆಯಿಂದ ಸಿಗುವಂತಹ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಜನರಿಗೆ ಸರಿಯಾದ ಸಮಯಕ್ಕೆ ತಲುಪಿಸುವಂತಾಗಬೇಕು ಹಾಗೂ ಮಳೆಗಾಲದಲ್ಲಿ ಪ್ರವಾಹ ಪೀಡಿತ ಹಾಗೂ ತೊಂದರೆ ಆದಂತಹ ಸ್ಥಳಗಳಿಗೆ ಖುದ್ದಾಗಿ ತೆರಳಿ ಸಮಸ್ಯೆಯನ್ನು ಬಗೆಹರಿಸುವಂತೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಹೇಳಿದರು ಕೊಯನಾಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಿರ್ಮಲ ಭರತ್ ಅವರು ಮಾತನಾಡಿ ಜನರಿಗೆ ಹಕ್ಕುಪತ್ರ ಹಾಗೂ ಸರ್ವೇ ಕಾರ್ಯಗಳನ್ನು ಸಕಾಲದಲ್ಲಿ ಕಲ್ಪಿಸುವಂತೆ ಶಾಸಕರು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಂಚಣಿದಾರರಿಗೆ ಮಂಜೂರಾತಿ ಆದೇಶ ಪತ್ರ ನೀಡಲಾಯಿತು. ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ತಹಶೀಲ್ದಾರ್ ಕಿರಣ್ ಗೌರಯ್ಯ, ಸಂಪಾಜೆ ಕಂದಾಯ ಪರಿವೀಕ್ಷಕರು ಬಿ.ಜಿ.ವೆಂಕಟೇಶ್ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರು ಇತರರು ಉಪಸ್ಥಿತರಿದ್ದರು. ಮಣಿ ಅವರು ಪ್ರಾರ್ಥಿಸಿ, ಕೊಯಾನಡು ಶಾಲೆಯ ಶಿಕ್ಷಕರಾದ ವಿಶ್ವನಾಥ್ ಹೋಬಳಿ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!