ಉದಯವಾಹಿನಿ, ಚಿಕ್ಕಮಗಳೂರು: ಬಜೆಟ್ ಮುಗಿದ ತಕ್ಷಣ ರಾಜ್ಯದಲ್ಲಿ ಮತ್ತೆ ಕುರ್ಚಿ ಕದನ ಆರಂಭವಾಗುವ ಲಕ್ಷಣ ಕಾಣಿಸಿಕೊಂಡಿದೆ. ಈ ಬಾರಿ ಸಿದ್ದರಾಮಯ್ಯ ಬಜೆಟ್ ಮುಗೀತು. ಮುಂದಿನ ಬಜೆಟ್ ಡಿಕೆಶಿಯವರದ್ದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಆಪ್ತ ಹಾಗೂ ಕಾಂಗ್ರೆಸ್ಸಿನ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಾರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಮುಂದಿನ ಬಜೆಟ್ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಮಂಡನೆ ಮಾಡುತ್ತಾರೆ. ಮುಖ್ಯಮಂತ್ರಿಯಾಗಿ ಜನಸಾಮಾನ್ಯರು, ರೈತರ ಪರವಾದ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ರಾಜ್ಯ ಕಾಂಗ್ರೆಸ್ ಕುರ್ಚಿ ಫೈಟ್ ನಡೆಯುವ ಹೊತ್ತಿನಲ್ಲಿ ಈ ಪೋಸ್ಟ್ ಕಿಚ್ಚು ಹೊತ್ತಿಸಿದೆ.
ಈ ರೀತಿಯ ಚರ್ಚೆಯ ನಡುವೆಯೂ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ, ಡಿಕೆಶಿ ಹಾಗೂ ನನ್ನದು ಹಾಲು-ಜೇನಿನಂತಹ ಸಂಬಂಧ. ಯಾರಿಗೂ ಹುಳಿ ಹಿಂಡೋಕಾಗಲ್ಲ ಎಂದಿದ್ದರು. ಅಲ್ಲದೇ ಕಾಂಗ್ರೆಸ್ (Congress) ಪಕ್ಷದದವರೇ ಸಿಎಂ ಆಗಿರುತ್ತಾರೆ ಎಂದು ಕುರ್ಚಿ ಕದನದ ಹೇಳಿಕೆ ಕೊಡುತ್ತಿದ್ದವರಿಗೆ ಹಾಗೂ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದ ಹೆಚ್‌ಡಿಕೆಗೆ ತಿರುಗೇಟು ನೀಡಿದ್ದರು.
