ಉದಯವಾಹಿನಿ, ಇಸ್ಲಾಮಾಬಾದ್, ಸೌದಿ ಅರೇಬಿಯಾ ಮೇಲೆ ದಾಳಿ ಮಾಡಿದರೆ ನಾವು ಸುಮ್ಮನಿರಲ್ಲ ಎಂದು ಇರಾನ್​ಗೆ ಪಾಕಿಸ್ತಾನ ಎಚ್ಚರಿಕೆಯ ಸಂದೇಶ ರವಾನಿಸಿದೆ. ಸೌದಿ ಅರೇಬಿಯಾ ಜೊತೆ ಪಾಕಿಸ್ತಾನ ಮಿಲಿಟರಿ ಒಪ್ಪಂದ ಹೊಂದಿದೆ. ಈ ಒಪ್ಪಂದದ ಪ್ರಕಾರ ಈ ಇಬ್ಬರಲ್ಲಿ ಯಾರ ಮೇಲೆ ಆಕ್ರಮಣವಾದರೂ ಮತ್ತೊಬ್ಬರು ನೆರವಿಗೆ ಧಾವಿಸಬೇಕು. ಈಗ ಸೌದಿ ಅರೇಬಿಯಾದ ಪ್ರಮುಖ ನಗರಗಳ ಮೇಲೆ ಇರಾನ್ ದಾಳಿ ಎಸಗುತ್ತಿರುವುದರಿಂದ ಪಾಕಿಸ್ತಾನವು ಒಪ್ಪಂದದ ಕಟ್ಟುಪಾಡುಗಳಿಗೆ ಒಳಗಾಗಬೇಕಾಗಬಹುದು. ಹೀಗಾಗಿ, ಇರಾನ್​ಗೆ ಪಾಕಿಸ್ತಾನ ಎಚ್ಚರಿಕೆ ಕೊಟ್ಟಿದೆ.

ಸೌದಿ ಅರೇಬಿಯಾ ಜೊತೆ ಪಾಕಿಸ್ತಾನ ದ್ವಿಪಕ್ಷೀಯ ರಕ್ಷಣಾ ಒಪ್ಪಂದ ಹೊಂದಿದೆ. ಇದು ಇಡೀ ವಿಶ್ವಕ್ಕೆ ಗೊತ್ತಿದೆ. ಒಪ್ಪಂದಕ್ಕೆ ಪಾಕಿಸ್ತಾನ ಕಟ್ಟುಬಿದ್ದಿದೆ. ಈ ಒಪ್ಪಂದವು ಇರಾನ್ ಗಮನಕ್ಕಿರಬೇಕು. ಇರಾನ್​ನ ನಾಯಕತ್ವ ಸ್ಥಾನದಲ್ಲಿರುವ ನಮ್ಮ ಸಹೋದರರಿಗೆ ಇದನ್ನು ನೆನಪಿಸಲು ಇಚ್ಛಿಸುತ್ತೇನೆ ಎಂದು ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!