
ಉದಯವಾಹಿನಿ, ಔರಾದ್ :ತಾಲೂಕಿನ ಚಿಂತಾಕಿ ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಮರೆಡ್ಡಿ ಹಣಮಾರೆಡ್ಡಿ ಕೌಡಾಲೆ ಹಾಗೂ ಉಪಾಧ್ಯಕ್ಷರಾಗಿ ಅಶ್ವಿನಿ ಅನಿಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಪಂ 20 ಸದಸ್ಯರಲ್ಲಿ 17 ಸದಸ್ಯರು ಹಾಜರಾಗಿದ್ದು, ಯಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದಿಯಿತು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಭಾಷ್ ದಾಲಗೊಂಡೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಗಿಸಿದರು. ಪಿಡಿಒ ಶರಣಪ್ಪ ನಾಗಲಗಿದ್ದೆ ಸಾಥ್ ನೀಡಿದರು. ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹಾಜರಾದರು. ಬಳಿಕ ಮಾತನಾಡಿ, ಚಿಂತಾಕಿ ಗ್ರಾಪಂ ನಮ್ಮ ಬೆಂಬಲಿಗರ ತೆಕ್ಕೆಗೆ ಬಂದಿರುವುದು ಸಂತಸದ ವಿಷಯವಾಗಿದೆ. ಮುಂದೆ ಎಲ್ಲಾ ಸದಸ್ಯರು ಒಮ್ಮತದಿಂದ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು. ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಒಗ್ಗಟ್ಟಾಗಿ ಅಭಿವೃದ್ಧಿ ಸಲಹೆ ನೀಡಿದರು. ಇನ್ನೂ ರಾಮರೆಡ್ಡಿ ಹಣಮಾರೆಡ್ಡಿ ಕೌಡಾಲೆ ಅವರು ನಿವೃತ್ತಿ ಮುಖ್ಯಗುರುಗಳಾದ್ದಾರೆ. ಅವರಿಗೆ ಅನುಭವವಿದೆ ಎಂದರು. ಪ್ರಮುಖರಾದ ಗ್ರಾಪಂ ಸದಸ್ಯರು, ತಾಪಂ, ಗ್ರಾಪಂ ಸಿಬ್ಬಂದಿ ಸೇರಿದಂತೆ ಗ್ರಾಮದ ಮುಖಂಡರು ಪಾಲ್ಗೊಂಡರು. ಬಳಿಕ ಗ್ರಾಮದ ಪ್ರಮುಖ ಬೀದಿಯಲ್ಲಿ ಅದ್ಧೂರಿಯಾಗಿ ವಿಜಯೋತ್ಸವದ ಆಚರಿಸಿದರು
