
ಉದಯವಾಹಿನಿ, ಹುಣಸಗಿ: ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾನದ ಬಿಸಿ ಊಟ ಸಿಗುತ್ತಿಲ್ಲ ಈ ಸಮಸ್ಯೆದ ಬಗ್ಗೆ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಮಾದಿಗ ಯುವ ಸೇನೆ ನಗರ ಘಟಕದ ಅಧ್ಯಕ್ಷರಾದ ಸಿದ್ದು ಬಾವಿಮನಿ ಆಗ್ರಹಿಸಿದ್ದಾರೆ. ತಾಲೂಕಿನ ಚನ್ನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ವರ್ಗಗಳಿಂದ ಬಿಸಿ ಊಟ ಸಿಗುತ್ತಿಲ್ಲ, ಈ ಸಮಸ್ಯೆ ಬಗ್ಗೆ ಗಮನ ಹರಿಸಿಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಯಾದಗಿರಿ ಇವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ಈ ಶಾಲೆಗೆ ಸುಮಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಮಧ್ಯಾನದ ಬಿಸಿ ಊಟ ಸಿಗುತ್ತಿಲ್ಲ, ವಿದ್ಯಾಭ್ಯಾಸ ಮಾಡುವ ಬಡ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ, ಎಲ್ಲಾ ಜನರು ಜೀವನ ಸಮಾನವಾಗಿ ಇರುವುದಿಲ್ಲ, ಕೆಲವರು ಒಂದು ಒತ್ತು ಊಟಕ್ಕಾಗಿ ದುಡ್ಡಿಯು ಪರಿಸ್ಥಿತಿ ಇರುತ್ತದೆ ಈ ಕಾರಣದಿಂದ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಈ ಸಮಸ್ಯೆ ಬಗ್ಗೆ ಕಾಳಜಿ ವಹಿಸಿ ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ ಈ ಸಂದರ್ಭದಲ್ಲಿ ಬಸವರಾಜ ಹಗರಟಗಿ ಸೇರಿದಂತೆ ಸಂಘಟನೆಯ ಸದಸ್ಯರು ಇದ್ದರು.
