ಉದಯವಾಹಿನಿ, ಬೈರೂತ್: ಲೆಬನಾನ್‌ನ ರಾಜಧಾನಿ ಬೈರೂತ್‌ನ ದಕ್ಷಿಣ ಉಪನಗರಗಳ ಮೇಲೆ ಇಸ್ರೇಲ್ ಶುಕ್ರವಾರ ಬೆಳಿಗ್ಗೆ ಭಾರಿ ವಾಯುದಾಳಿ ನಡೆಸಿದೆ. ‘ಹಿಜ್ಜುಲ್ಲಾ ಉಗ್ರರ ತಾಣಗಳ ಮೇಲೆ ದಾಳಿ ನಡೆಸಲಾಗಿದೆ. ಆ ಪ್ರದೇಶಗಳಲ್ಲಿರುವ ಜನರು ಸ್ಥಳಾಂತರಗೊಳ್ಳುವಂತೆ ಮೊದಲೇ ಮುನ್ನೆಚ್ಚರಿಕೆ ನೀಡಲಾಗಿತ್ತು. ದಾಳಿಯು ಯಶಸ್ವಿಯಾಗಿದ್ದು, ಭಯೋತ್ಪಾದಕರ ಮಿಲಿಟರಿ ನೆಲೆಗಳನ್ನು ನಾಶಪಡಿಸಲಾಗಿದೆ’ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಇಸ್ರೇಲ್ ವಾಯುದಾಳಿ ನಡೆಸಿದ ಉಪನಗರಗಳ ವಸತಿ ಸಮುಚ್ಚಯಗಳು ಹಾನಿಗೊಳಗಾಗಿವೆ. ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಇಡೀ ಪ್ರದೇಶದಲ್ಲಿ ದೂಳು ತುಂಬಿರುವ ವಿಡಿಯೊ ತುಣಕನ್ನು ಎಎಫ್‌ಪಿಟಿವಿಯು ಬಿತ್ತರಿಸಿದೆ.
ಸೋಮವಾರದಿಂದ ನಡೆದಿರುವ ದಾಳಿಯಲ್ಲಿ 123 ಜನರು ಮೃತಪಟ್ಟಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.
