ಉದಯವಾಹಿನಿ, ಇರಾನಿನ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಕೆಲವೊಮ್ಮೆ ಬಳಸುತ್ತಿದ್ದ ಭೂಗತ ಮಿಲಿಟರಿ ಬಂಕರ್ ಮೇಲೆ ವೈಮಾನಿಕ ದಾಳಿ ನಡೆಸಿರುವ ವಿಡಿಯೊವನ್ನು ಇಸ್ರೇಲಿ ರಕ್ಷಣಾ ಪಡೆಗಳು ಹಂಚಿಕೊಂಡಿವೆ. ಟೆಹರಾನ್‌ನಲ್ಲಿ ) 50 ಇಸ್ರೇಲಿ ಯುದ್ಧ ವಿಮಾನಗಳು, ಭೂಗತ ಮಿಲಿಟರಿ ಬಂಕರ್ ಅನ್ನು ಧ್ವಂಸಗೊಳಿಸಿವೆ ಎಂದು ಐಡಿಎಫ್ ಹೇಳಿದೆ.ಟೆಹರಾನ್‍ನಲ್ಲಿರುವ ಅಲಿ ಖಮೇನಿ ಅವರ ಭೂಗತ ಮಿಲಿಟರಿ ಬಂಕರ್ ಅನ್ನು 50 ಇಸ್ರೇಲಿ ವಾಯುಪಡೆಯ ಯುದ್ಧ ವಿಮಾನಗಳು ಕೆಡವಿದವು ಎಂದು ಐಡಿಎಫ್ ಏರಿಯಲ್ ದೃಶ್ಯಾವಳಿಗಳನ್ನು ಹಂಚಿಕೊಂಡಿದೆ. ನಾಯಕನು ಯುದ್ಧ ಕಾರ್ಯಾಚರಣೆಗಳನ್ನು ನಿರ್ದೇಶಿಸಬಹುದಾದ ಸುರಕ್ಷಿತ ತುರ್ತು ಸೌಲಭ್ಯವಾಗಿ ನಿರ್ಮಿಸಲಾಗಿದ್ದ ಭೂಗತ ಬಂಕರ್ ಅನ್ನು ರೋರ್ ಆಫ್ ದಿ ಹ್ಯಾರಿಯರ್ ಕಾರ್ಯಾಚರಣೆಯ ಸಮಯದಲ್ಲಿ ಬಳಸುವ ಮೊದಲೇ ನಾಶಪಡಿಸಲಾಗಿದೆ ಎಂದು ಇಸ್ರೇಲಿ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಇರಾನ್ ಮತ್ತು ಲೆಬನಾನ್ ಮೇಲೆ ದಾಳಿಗಳನ್ನು ನಡೆಸಿತು. ಏಳನೇ ದಿನಕ್ಕೆ ಕಾಲಿಟ್ಟಿರುವ ಈ ಯುದ್ಧವು ಜಾಗತಿಕ ಶಕ್ತಿಗಳನ್ನು ಸೆಳೆದುಕೊಂಡಿದೆ. ವಿಶ್ವದ ಇಂಧನ ಮತ್ತು ಸಾರಿಗೆ ಕ್ಷೇತ್ರಗಳನ್ನು ಅಸ್ತವ್ಯಸ್ತಗೊಳಿಸಿದೆ.  ಇರಾನ್‌ನ ರಾಜಧಾನಿ ಟೆಹರಾನ್‌ನಲ್ಲಿ ಆಕಾಶದಲ್ಲಿ ಜೋರಾದ ಸ್ಫೋಟಗಳ ಶಬ್ಧಗಳು ಪ್ರತಿಧ್ವನಿಸಿದವು.

Leave a Reply

Your email address will not be published. Required fields are marked *

error: Content is protected !!