ಉದಯವಾಹಿನಿ, ಬೇಸಿಗೆಯ ಬಿಸಿಲು ಶುರುವಾಗಿದೆ. ಬಿಸಿಲಿನ ಬೇಗೆಯಿಂದ ಪಾರಾಗಲು, ಅತಿಯಾದ ಬೆವರು ಮತ್ತು ಸುಸ್ತಿನಿಂದ ಪರಿಹಾರ ಪಡೆಯಲು ಪ್ರಕೃತಿ ನೀಡಿರುವ ವರದಾನವೇ ಎಳನೀರು ಆದರೆ, ಎಳನೀರನ್ನು ಯಾವಾಗ ಬೇಕಾದರೂ ಕುಡಿಯುವ ಬದಲು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅದ್ಭುತವಾದ ಆರೋಗ್ಯ ಪ್ರಯೋಜನಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಡಯಟೀಶಿಯನ್ ಡಾ. ಅನಾಮಿಕಾ ಕೌರ್ ಅವರ ಪ್ರಕಾರ, ಎಳನೀರು ನಮ್ಮ ದೇಹಕ್ಕೆ ನೈಸರ್ಗಿಕ ಎನರ್ಜಿ ಡ್ರಿಂಕ್ ನಂತೆ ಕೆಲಸ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದ್ರೆ ಏನೆಲ್ಲ ಲಾಭ..?
ದೇಹಕ್ಕೆ ರೀ-ಹೈಡ್ರೇಶನ್ ರಾತ್ರಿಯ ನಿದ್ದೆಯಲ್ಲಿ ನಮ್ಮ ದೇಹ ಕಳೆದುಕೊಂಡ ನೀರಿನಂಶವನ್ನು ಮರಳಿ ತುಂಬಲು ಎಳನೀರು ಅತ್ಯುತ್ತಮ. ಇದರಲ್ಲಿರುವ ಎಲೆಕ್ಟ್ರೋಲೈಟ್‌ಗಳು ದೇಹಕ್ಕೆ ತಕ್ಷಣದ ಶಕ್ತಿ ಹಾಗೂ ಚೈತನ್ಯವನ್ನು ನೀಡುತ್ತವೆ.ಜೀರ್ಣಕ್ರಿಯೆ ಸುಧಾರಣೆ: ಖಾಲಿ ಹೊಟ್ಟೆಯಲ್ಲಿ ಎಳನೀರು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಆಸಿಡಿಟಿ ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಂದ ತ್ವರಿತ ಮುಕ್ತಿ ಸಿಗುತ್ತದೆ. ರಕ್ತದೊತ್ತಡ (BP) ನಿಯಂತ್ರಣ: ಎಳನೀರಿನಲ್ಲಿ ಸಮೃದ್ಧವಾಗಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯಕ್ಕೂ ತುಂಬಾ ಒಳಿತು. ತ್ವಚೆಯ ಸೌಂದರ್ಯ ವೃದ್ಧಿ: ದೇಹದಲ್ಲಿರುವ ವಿಷಕಾರಿ ತ್ಯಾಜ್ಯಗಳನ್ನು (Toxins) ಹೊರಹಾಕುವ ಮೂಲಕ ತ್ವಚೆ ಕಾಂತಿಯುತವಾಗಿ ಹೊಳೆಯುವಂತೆ ಮಾಡುತ್ತದೆ. ಆಯಾಸ ಕಡಿಮೆ ಮಾಡಿ ದೇಹವನ್ನು ಪುನಶ್ಚೇತನಗೊಳಿಸುತ್ತದೆ.
