ಉದಯವಾಹಿನಿ,ಕಾರಟಗಿ: ಹಿಂದು ಮುಸ್ಲೀಂ ಬಾಂದವರು ಸೌಹಾರ್ದಯುತವಾಗಿ ಭಾವೈಕ್ಯತೆಯಿಂದ ಆಚರಿಸುವ ಮೊಹರಂ ಹಬ್ಬಕ್ಕೆ ಶನಿವಾರ ಸಂಜೆ ಭಕ್ತ ಸಮೂಹದ ಹರ್ಷೊದ್ಘಾರದೊಂದಿಗೆ ವಿಜೃಂಭಣೆಯಿAದ ವಿದಾಯ ಹೇಳಲಾಯಿತು.ಪಟ್ಟಣದ ಹಳೆಬಜಾರ್‌ನ ಮಸೂದಿಯಲ್ಲಿನ ಹಸೇನ್, ಹುಸೇನ್, ಹಾಗೂ ಉಪ್ಪಾರ ಓಣಿಯ ಮಸೂದಿಯಲ್ಲಿ ಕೂಡಿಸಿದ ಈಮಾಮಿ ಕಾಶೀಂ, ಹಾಗೂ ಮೌಲಾಲಿ, ಅಕ್ಬರ್‌ಅಲಿ, ಲಾಲಸಾಬ್ ಸೇರಿದಂತೆ ಪಟ್ಟಣದ ನಜೀರ್ ಸಾಬ್ ಕಾಲೋನಿ, ಇಂದಿರಾನಗರ ವಿವಿಧಡೆಯಲ್ಲಿ ಕೂಡಿಸಿದ ಅಲೈ ದೇವರುಗಳು ದೇವರುಗಳನ್ನು ವಿವಿಧ ವಾದ್ಯ ಮೇಳ ಹಾಗೂ ಹಲಗೆಯ ತಾಳಗಳೊಂದಿಗೆ ಸಂಗಮ ಸ್ಥಳಕ್ಕೆ ತೆರಳುವ ಮಾರ್ಗ ಮದ್ಯ ಶರಣ ಬಸವೇಶ್ವರ ದೇವಸ್ಥಾನದ ಬಳಿ ವಿವಿಧಡೆ ಮಸೂದಿಯಲ್ಲಿ ಕೂಡಿಸಿದ ದೇವರುಗಳು ಕೂಡಿಕೊಂಡು ನಿಧಾನವಾಗಿ ಸಾಗುತ್ತ ಸಂಗಮ ಸ್ಥಳಕ್ಕೆ ತಲುಪಿದವು.ಇನ್ನು ದೇವರು ಹೊರಡುವ ಸಮಯದಲ್ಲಿ ರಸ್ತೆಯೂದ್ಧಕ್ಕೂ ಮಹಿಳೆಯರು ಮಕ್ಕಳು ಮನೆಯ ಮಾಳಿಗೆ ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊAಡು ದೇವರಿಗೆ ಮಂಡಕ್ಕಿ ಲವಂಗ ಹೀಗೆ ತಮ್ಮ ಇಷ್ಟಾರ್ಥ ಪೂರೈಕೆಗೆ ಹಲವು ವಸ್ತುಗಳನ್ನು ದೇವರಿಗೆ ದೂರದಿಂದಲೆ ಎಸೆಯುತ್ತಿದ್ದರು. ಸಂಗಮ ಸ್ಥಳಕ್ಕೆ ತೆರಳುವ ಸುಂಕಲಮ್ಮ ದೇವಸ್ಥಾನದ ಬಳಿಯ ಬುಡ್ಡೆ ಕಲ್ಲಿಗೆ ಪೂಜೆ ಸಲ್ಲಿಸಿದ ಬಳಿಕ ದೇವರುಗಳು ಮುಂದೆ ಸಾಗಿದವು. ಮುಸ್ಲೀಮ್ ಸಮಾಜದ ಮೌಲಾಲಿಯವರು ಸಂಗಮ ಸ್ಥಳಕ್ಕೆ ತಲುಪಿಸುವ ಕಾರ್ಯದ ನೇತ್ರತ್ವ ವಹಿಸಿದ್ದರು. ಬುಡ್ಡೆಕಲ್ಲಿನ ಬಳಿ ಪೂಜೆ ಸಲ್ಲಿಸಿದ ನಂತರ ದೇವರುಗಳಿಂದ ಹೇಳಿಕೆ ಕೇಳಿಕೆ ಭಕ್ತರಿಂದ ನಡೆಯಿತು. ದೇವರು ತೆರಳುವ ಮಾರ್ಗ ದಿಂದ ಸಂಗಮ ಸ್ಥಳದ ವರೆಗೂ ಪಿ.ಐ. ಸಿದ್ಧರಾಮಯ್ಯ ಸ್ವಾಮಿ ಹಿರೇಮಠ ಬಿಗಿ ಭದ್ರತೆಒದಗಿಸಿದ್ದರು. ಭಾವೈಕ್ಯತೆಗೆ ಹೇಸರಾದ ಹಿಂದು ಮುಸ್ಲೀಮ್ ಆಚರಣೆಯ ಈ ಹಬ್ಬ ಸಡಗರ ಸಂಭ್ರಮದಿAದ ಸೌಹಾರ್ಧಯುತವಾಗಿ ಆಚರಣೆಮಾಡುವುದು ವಿಶೇಷವಾಗಿದೆ.

Leave a Reply

Your email address will not be published. Required fields are marked *

error: Content is protected !!