ಉದಯವಾಹಿನಿ, ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಕ್ರಾಸ್ ಬಳಿ ಆಲ್ಟೋ ಕಾರು ಹೊತ್ತಿ ಉರಿದಿದೆ. ಈ ಅವಘಡದಲ್ಲಿ 70 ವರ್ಷದ ಚಾಲಕ ಸಜೀವ ದಹನವಾಗಿದ್ದಾರೆ.
ಪೆನುಮಲೆ ಗ್ರಾಮದ ಉದಯ್ ಕುಮಾರ್ (70) ಮೃತ ಚಾಲಕ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಬಾಗೇಪಲ್ಲಿಯಿಂದ ಸ್ವಗ್ರಾಮಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಆತ್ಮಹತ್ಯೆಯೋ ಅಥವಾ ಆಕಸ್ಮಿಕವೋ ಎಂಬ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
