ಉದಯವಾಹಿನಿ, ಬೀದರ್/ಧಾರವಾಡ: ಟಿ20 ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಭರ್ಜರಿಯಾಗಿ ಗೆಲವು ಸಾಧಿಸಿದೆ. ಈ ಹಿನ್ನೆಲೆ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ. ಅದರಂತೆ ಬೀದರ್ , ಧಾರವಾಡದಲ್ಲಿ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಬೀದರ್ ನಗರದ ಅಂಬೇಡ್ಕರ್ ವೃತದಲ್ಲಿ ಸೇರಿದ್ದ ಕ್ರಿಕೆಟ್ ಅಭಿಮಾನಿಗಳು ಕಲರ್‌ ಪುಲ್ ಪಟಾಕಿ ಸಿಡಿಸಿ, ಬ್ಯಾಂಡ್‌ಗೆ ಭರ್ಜರಿ ಸ್ಟೆಪ್ ಹಾಕುತ್ತಾ ಸಂಭ್ರಮಾಚರಣೆ ಮಾಡಿದ್ದಾರೆ. ಕೈಯಲ್ಲಿ ಭಾರತದ ತಿರಂಗಾ ಧ್ವಜ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.

ಧಾರವಾಡದಲ್ಲೂ ಸಂಭ್ರಮಾಚರಣೆ: ಭಾರತ ಕಪ್ ಗೆಲ್ಲುತಿದ್ದಂತೆಯೇ ವಿದ್ಯಾಕಾಶಿ ಧಾರವಾಡದಲ್ಲಿ ಕೂಡಾ ಸಂಭ್ರಮ ಮನೆ ಮಾಡಿತ್ತು. ನಗರದ ಹೆಬ್ಬಳ್ಳಿ ಅಗಸಿ ಬಡಾವಣೆಯಲ್ಲಿ ಎಲ್‌ಇಡಿ ಸ್ಕ್ರೀನ್‌ನಲ್ಲಿ ಫೈನಲ್ ಮ್ಯಾಚ್ ನೋಡಲು ಅವಕಾಶ ಮಾಡಲಾಗಿತ್ತು. ಯುವಕರು ಟಿಂ ಇಂಡಿಯಾ ಗೆಲ್ಲುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಭಾರತ ತಂಡದ ಪರ ಜೈಕಾರ ಹಾಕಿದರು. ಮತ್ತೊಂದು ಕಡೆ ನಗರ‌ ಮತ್ತು ಗ್ರಾಮೀಣ ಭಾಗದಲ್ಲಿ ಕೂಡಾ ಯುವಕರು ಪಟಾಕಿ ಸಿಡಿಸಿ ಸಂತಸ ಪಟ್ಟರು. ಕೆಲ ಯುವಕರು ಭಾರತದ ಧ್ವಜ ಹಿಡಿದು ಬೈಕ್ ಮೇಲೆಯೇ ನಗರದ ತುಂಬೆಲ್ಲ ಜೈಕಾರ ಹಾಕುತ್ತ ಸಂಚರಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!