ಉದಯವಾಹಿನಿ, ಥಾಣೆ (ಮಹಾರಾಷ್ಟ್ರ): ಎರಡೂವರೇ ವರ್ಷದವಳಿದ್ದಾಗಲೇ ವಿಭಿನ್ನ ದಾಖಲೆಗಳನ್ನು ಬರೆದಿರುವ 2ನೇ ತರಗತಿ ಬಾಲಕಿಯೋರ್ವಳು ಇದೀಗ ಭಾರತದ ಸಂವಿಧಾನದ ವಿಧಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಇಂಡಿಯಾ ಬುಕ್​​ ಆಫ್ ರೆಕಾರ್ಡ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾಳೆ.

ಥಾಣೆಯ ಕೊಪ್ರಿ ಪೂರ್ವ ಪ್ರದೇಶ ಮೂಲದ 6 ವರ್ಷ10 ತಿಂಗಳ ಜ್ಞಾನವಿ ವಾನರೆ ಈ ಸಾಧನೆ ಮಾಡಿದ ಬಾಲಕಿ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದು ಎಂಬ ಮಾತಿನಂತೆ ಜ್ಞಾನವಿ ತನ್ನ ನೆನಪಿನ ಶಕ್ತಿ ಮೂಲಕ ಇಡೀ ಥಾಣೆಗೆ ಕಿರೀಟ ತಂದಿದ್ದಾಳೆ. ಜ್ಞಾನವಿ ಸಂವಿಧಾನವನ್ನು ಪೋಷಕರ ಸಹಾಯದಿಂದ ತಿಳಿದುಕೊಂಡು ಅದರ ಅಧ್ಯಯನ ಮಾಡುವ ಮೂಲಕ ದಾಖಲೆಯನ್ನೇ ಸೃಷ್ಟಿಸಿದ್ದಾಳೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಒಟ್ಟು 3 ದಾಖಲೆ: 6 ವರ್ಷ 10 ತಿಂಗಳ ವಯಸ್ಸಿನ ಜ್ಞಾನವಿ ವಾನರೆ ಎಂಬ ಪುಟ್ಟ ಹುಡುಗಿ ಭಾರತದ ಸಂವಿಧಾನದ ಬಗ್ಗೆ ಮಾಹಿತಿ ಹೊಂದಿದ್ದಾಳೆ. ಸಂವಿಧಾನದ ಬಗ್ಗೆ ಯಾವುದೇ ಅಳಕು ಇಲ್ಲದೇ ಮಾಹಿತಿ ನೀಡುವ ಮೂಲಕ ಎಲ್ಲರನ್ನು ಬೆರಗುಗೊಳಿಸುತ್ತಾಳೆ.
ಜ್ಞಾನವಿ ತನ್ನ ಪೋಷಕರೊಂದಿಗೆ ಥಾಣೆಯ ಕೊಪ್ರಿ ಪೂರ್ವ ಪ್ರದೇಶದಲ್ಲಿ ವಾಸಿಸುತ್ತಿದ್ದಾಳೆ. ವಿಶಿಷ್ಟ ದಾಖಲೆಗಳನ್ನು ನಿರ್ಮಿಸುತ್ತಿರುವ ಥಾಣೆ ಮತ್ತು ದೇಶದ ವಿದ್ಯಾರ್ಥಿಗಳಲ್ಲಿ ಜ್ಞಾನವಿ ವಾನರೆ, ಭಾರತದ ಸಂವಿಧಾನದ ವಿಧಿಗಳನ್ನು ಹೇಳುವ ಮೂಲಕ ದಾಖಲೆ ನಿರ್ಮಿಸಿದ್ದಾಳೆ. ಥಾಣೆಯ ಕೊಪ್ರಿ ಪೂರ್ವ ಪ್ರದೇಶದಲ್ಲಿ ವಾಸಿಸುವ ವಾನರೆ ಕುಟುಂಬದ ಸದಸ್ಯೆ ಈ ಜ್ಞಾನವಿ. ತನ್ನ ತಾಯಿಯ ಸಹಾಯದಿಂದ ಅಧ್ಯಯನ ಮಾಡುತ್ತಿದ್ದಾಳೆ. ಜ್ಞಾನವಿಯ ತಾಯಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡುತ್ತಿದ್ದಾರೆ. ಅವರು ಅಧ್ಯಯನ ಮಾಡುವಾಗ ಜ್ಞಾನವಿ ಸಹ ಅದರಲ್ಲಿ ಪಾಲ್ಗೊಂಡು, ತಾಯಿಯೊಂದಿಗೆ ಜ್ಞಾನಾರ್ಜನೆ ಮಾಡುತ್ತಾಳೆ.

ಇನ್ನು ಜ್ಞಾನವಿ 100ಕ್ಕೂ ಹೆಚ್ಚು ದೇಶಗಳ ಧ್ವಜಗಳನ್ನು ಸುಲಭವಾಗಿ ಗುರುತಿಸುತ್ತಾಳೆ. ಇದಷ್ಟೇ ಅಲ್ಲ ಈ ಪುಟ್ಟ ಪೋರಿಗೆ ಯೋಗದ ಬಗ್ಗೆ ಅತ್ಯಾಸಕ್ತಿ ಇದೆ. ಜ್ಞಾನವಿ ತನ್ನ ಎರಡೂವರೆ ವಯಸ್ಸಿನಲ್ಲಿ ಯೋಗಾಸದ ವಿವಿಧ ಆಸನಗಳನ್ನು ಸುಲಭವಾಗಿ ಹಾಕುತ್ತಾಳೆ. ಇದರಲ್ಲಿ ಅವಳು 48 ಯೋಗದ ಆಸನಗಳು ಮತ್ತು 10 ರೀತಿಯ ಪ್ರಾಣಾಯಾಮಗಳನ್ನು ಸುಲಭವಾಗಿ ಮಾಡುತ್ತಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಾಡಿದ ಈ ಆಸನಗಳು ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಿಸಲಾಗಿದೆ. ಎರಡನೇ ದಾಖಲೆಯನ್ನು ಅವಳು ಕೇವಲ ಮೂರು ವರ್ಷದವಳಿದ್ದಾಗ ಮಾಡಿದ್ದಾಳೆ. ಪ್ರಪಂಚದ ಎಲ್ಲಾ ದೇಶಗಳ ಧ್ವಜಗಳನ್ನು ಗುರುತಿಸಿ ಹೇಳುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾಳೆ.ಉತ್ತಮ ಏಕಾಗ್ರತೆ, ತಾಯಿ ಕೊಟ್ಟ ಶಿಕ್ಷಣದಿಂದ ಜ್ಞಾನವಿ ಇಷ್ಟು ಸಾಧನೆ ಮಾಡಿದ್ದಾಳೆ. ಚಿಕ್ಕ ಮಕ್ಕಳನ್ನು ಪ್ರೋತ್ಸಾಹಿಸುವುದು ಅವರ ಅಧ್ಯಯನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಇಲ್ಲಿ ಗಮನಿಸಬಹುದು.

 

Leave a Reply

Your email address will not be published. Required fields are marked *

error: Content is protected !!