ಉದಯವಾಹಿನಿ, ವಾಷಿಂಗ್ಟನ್: ಸೂರತ್‌ನಲ್ಲಿ ಚಾಟ್‌ಜಿಪಿಟಿ ಮೂಲಕ ಸರ್ಚ್‌ ಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಇಬ್ಬರು ಯುವತಿರ ಸಾವಿಗೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ʻಅಯ್ಯೋʼ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
ಕೇಟೀ ಮಿಲ್ಲರ್ ಎಂಬವರು ಯುವತಿಯರ ಆತ್ಮಹತ್ಯೆ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಅದರಲ್ಲಿ ಜೊತೆಗಿನ ಸಂವಹನದ ನಂತರ ಭಾರತದಲ್ಲಿ ಇಬ್ಬರು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ? ಆತ್ಮಹತ್ಯೆ ಹೇಗೆ ಮಾಡಬಹುದು? ಯಾವ ಔಷಧಿಗಳನ್ನು ಬಳಸಲಾಗುತ್ತದೆ ಎಂದು ಸರ್ಚ್‌ ಮಾಡಿದ್ದರು. ದಯವಿಟ್ಟು ನಿಮ್ಮ ಪ್ರೀತಿಪಾತ್ರರಿಗೆ ಬಳಸಲು ಬಿಡಬೇಡಿ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನ್ನು ಹಂಚಿಕೊಂಡಿರುವ ಮಸ್ಕ್‌ ʻಅಯ್ಯೋʼ ಎಂದು ಬರೆದುಕೊಂಡಿದ್ದಾರೆ.

ಸೂರತ್‌ನ ಸ್ವಾಮಿನಾರಾಯಣ ದೇವಾಲಯದ ಸ್ನಾನಗೃಹದೊಳಗೆ ಇಬ್ಬರು ಕಾಲೇಜು ವಿದ್ಯಾರ್ಥಿಗಳ ಶವಗಳು ಪತ್ತೆಯಾಗಿತ್ತು. ವಿಷಕಾರಿ ಔಷಧಗಳ ಚುಚ್ಚುಮದ್ದು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿತ್ತು.

 

Leave a Reply

Your email address will not be published. Required fields are marked *

error: Content is protected !!