ಉದಯವಾಹಿನಿ, ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ಜಾರಿ ಮಾಡಲು ಕ್ರಮವಹಿಸುತ್ತೇವೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಜಗದೇವ್ ಗುತ್ತೇದಾರ್ ಪ್ರಶ್ನೆ ಕೇಳಿದರು. ಕಲಬುರಗಿ ಇಂದಿರಾ ಕ್ಯಾಂಟೀನ್‌ನಲ್ಲಿ ಮೆನು ಪ್ರಕಾರ ತಿಂಡಿ ಕೊಡುತ್ತಿಲ್ಲ. ಕ್ವಾಲಿಟಿ ಊಟ ಸಿಗುತ್ತಿಲ್ಲ. ಕೊಡೋ ಊಟವೂ ಸರಿಯಾಗಿಲ್ಲ. ಈ ವ್ಯವಸ್ಥೆ ಸರಿ ಮಾಡಬೇಕು. ಇಂದಿರಾ ಕ್ಯಾಂಟೀನ್‌ನಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ಇದಕ್ಕೆ ಸಚಿವ ಬೈರತಿ ಸುರೇಶ್ ಉತ್ತರ ನೀಡಿ, ನಮಗೆ ಇರೋ ಮಾಹಿತಿ ಪ್ರಕಾರ ಮೆನು ಪ್ರಕಾರವೇ ಕೊಡಲಾಗಿದೆ. ಪ್ರಾದೇಶಿಕತೆಗೆ ಅನುಗುಣವಾಗಿ ಊಟ, ತಿಂಡಿ ಕೊಡುತ್ತಿದ್ದೇವೆ. ಈ ರೀತಿ ಊಟ ಸರಿಯಿಲ್ಲ ಎಂದು ನನಗೆ ದೂರು ಬಂದಿಲ್ಲ. ಡಿಸಿಗಳು ಇದರ ವ್ಯವಸ್ಥೆ ನೋಡುತ್ತಾರೆ. ವ್ಯವಸ್ಥೆ ಸರಿಯಿಲ್ಲದೇ ಹೋದರೆ ಅಧಿಕಾರಿಗಳನ್ನ ಕಳಿಸಿ ಸರಿ ಮಾಡುತ್ತೇವೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿ ಮಾಡುತ್ತೇವೆ. ಇಂದಿರಾ ಕ್ಯಾಂಟೀನ್‌ನಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಡಿಸಿಗಳಿಗೆ ಸೂಚನೆ ಕೊಡುತ್ತೇವೆ ಎಂದು ತಿಳಿಸಿದರು.
