ಉದಯವಾಹಿನಿ, ಕೋಲಾರ: ರಾಜ್ಯ ಸರ್ಕಾರದ ೫ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಗೆ ಈವರೆಗೆ ತಾಲ್ಲೂಕಿನ ನಗರ ಹಾಗೂ ಗ್ರಾಮೀಣಾ ಪ್ರದೇಶ ಸೇರಿದಂತೆ ಸುಮಾರು ೮೦ ಸಾವಿರಕ್ಕೊ ಅಧಿಕ ಗ್ರಾಹಕರು ನೊಂದಾಯಿಸಿ ಕೊಂಡಿದ್ದಾರೆ ಎಂದು ಬೆಸ್ಕಾಂ ಎ.ಇ.ಇ. ಸ್ವಾಮಿ ತಿಳಿಸಿದರು. ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಅವರು ಮಾತನಾಡಿ ೨೦೦ ಯೂನಿಟ್‌ವರೆಗಿನ ಉಚಿತ ವಿದ್ಯುತ್ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆಗಸ್ಟ್ ತಿಂಗ
ಳಲ್ಲಿ ೨೦೦ ಯೂನಿಟ್ ಒಳಗಿನ ಉಚಿತ ವಿದ್ಯುತ್ ಬಿಲ್ ಪಡೆಯಲು ಜುಲೈ ೨೭ರ ಒಳಗಾಗಿ ನೊಂದಾಯಿಸಿ ಕೊಳ್ಳಲು ಆರ್ಹ ಗ್ರಾಹಕರಿಗೆ ಕಾಲವಕಾಶವನ್ನು ನೀಡಲಾಗಿತ್ತು, ಜು,೧೦ರವರೆಗೆ ಸುಮಾರು ನಗರ ಹಾಗೂ ಗ್ರಾಮೀಣಾ ಪ್ರದೇಶ ಸೇರಿದಂತೆ ಸುಮಾರು ೫೦ ಸಾವಿರ ಮಂದಿ ನೊಂದಾಯಿಸಿದ್ದರು ನಂತರದಲ್ಲಿ ೪೦ ಸಾವಿರ ಮಂದಿ ನೊಂದಾಯಿಸಿ ಕೊಂಡಿರ ಬಹುದೆಂದು ಅಂದಾಜಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ೫೨ ಸಾವಿರ ಎಲ್.ಟಿ. ಮೀಟರ್‌ಗಳು ಹೊಂದಿದೆ.ಗ್ರಾಮೀಣ ಭಾಗದಲ್ಲಿ ೪೦ ಸಾವಿರಕ್ಕೂ ಅಧಿಕ ಮೀಟರ್‌ಗಳು ಹೊಂದಿದ್ದು ಇದರಲ್ಲಿ ಸುಮಾರು ೮೦ ಸಾವಿರ ಮೀಟರ್‌ಗಳ ಫಲಾನುಭವಿಗಳು ನೊಂದಾಯಿಸಿ ಕೊಂಡಿರ ಬಹುದೆಂದ ಅಂದಾಜಿಸಲಾಗಿದ್ದು, ಇದನ್ನು ಖಚಿತ ಪಡೆಸಲು ಬೆಂಗಳೂರಿನ ಮುಖ್ಯ ಕಛೇರಿಯಲ್ಲಿ ಖಚಿತ ಮಾಹಿತಿಯು ಆಗಸ್ಟ್ ಒಂದರ ನಂತರ ಲಭ್ಯವಾಗಲಿದೆ ಎಂದರು.
ಅಲ್ಲದೆ ಇದರ ಜೂತೆಗೆ ಭಾಗ್ಯ ಜ್ಯೋತಿ ಕುಟೀರ ಯೋಜನೆಯಲ್ಲಿ ಎಸ್.ಸಿ.ಎಸ್.ಟಿ, ಫಲಾನುಭವಿಗಳಿಗೆ ಉಚಿತ ೭೫ ಯೂನಿಟ್ ಸೇರಿದಂತೆ ಕೆಲವು ರಿಯಾಯಿತಿ ಯೋಜನೆಗಳು ಇದಕ್ಕೂ ಮೊದಲಿಂದ ಇದೆ ಎಂದು ಹೇಳಿದರು. ಹೀಗಾಗಿ ಜುಲೈ ೨೭ರ ಒಳಗೆ ನೊಂದಾಯಿಸಿ ಕೊಂಡಿರುವ ಬಹುತೇಕ ಗ್ರಾಹಕರಿಗೆ ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಬರಲಿದೆ. ಜುಲೈ ೨೭ರ ನಂತರ ತಡವಾಗಿ ನೊಂದಾಯಿಸಿ ಕೊಂಡವರಿಗೆ ಬೆಸ್ಕಾಂ ಬಿಲ್ ಬರಲಿದ್ದು, ಸೆಪ್ಟೆಂಬರ್‌ನಲ್ಲಿ ಶೊನ್ಯ ಬಿಲ್ ಬರಲಿದೆ, ಸಾಮಾನ್ಯವಾಗಿ ಎಲ್.ಟಿ ಮೀಟರ್ ಹೊಂದಿರುವವರು ಬಹುತೇಕ ಗೃಹ ಜ್ಯೋತಿ ವ್ಯಾಪ್ತಿಗೆ ಸೇರುವರು ಅವರದೆಲ್ಲಾ ೨೦೦ ಯೂನಿಟ್ ಒಳಗೆ ಇರಬಹುದು, ಎ.ಇ.ಹೆಚ್. ಮೀಟರ್ ಹೊಂದಿರುವವರದು ತುಸೆ ಹೆಚ್ಚು ಯೊನಿಟ್‌ಗಳ ಬರಬಹುದು. ಮನೆಯಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಯೊನಿಟ್‌ಗಳ ಬಳಕೆಯಾಗಲಿದೆ,ಹಾಗಾಗಿ ನಿಖರವಾದ ಅಂಕಿ ಅಂಶಗಳು ಪರಿಪೊರ್ಣವಾಗದೆ ಹೇಳಲಾಗದು ಒಂದು ಅಂದಾಜಿನ ಮೇಲೆ ಹೇಳಬಹುದಷ್ಟೆ ಎಂದರು.
