ಉದಯವಾಹಿನಿ, ಬೀಜಿಂಗ್‌: ಭಾರತದೊಂದಿಗಿನ ಗಡಿಭಾಗದಲ್ಲಿರುವ ಸೂಕ್ಷ್ಮ ಪ್ರದೇಶಗಳಲ್ಲಿನ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಮುಂದಿನ ಐದು ವರ್ಷಗಳಲ್ಲಿ ಬಲಪಡಿಸಲು ಚೀನಾ ಯೋಜನೆ ರೂಪಿಸಿದೆ. ಈ ವರ್ಷ ಆರಂಭಗೊಳ್ಳಲಿರುವ 15ನೇ ಪಂಚವಾರ್ಷಿಕ ಯೋಜನೆಯಲ್ಲಿ ಇದನ್ನು ಕಾರ್ಯಗತಗೊಳಿಸಲು ನಿರ್ಧರಿಸಿದೆ. ಈ ಯೋಜನೆಯಡಿ ಗಡಿಭಾಗದಲ್ಲಿ 394 ಕಿ.ಮೀ. ಉದ್ದದ ಹೆದ್ದಾರಿ ನಿರ್ಮಾಣವಾಗಲಿದೆ ಎಂದು ಪಂಚ ವಾರ್ಷಿಕ ಯೋಜನೆಯ ಕರಡು ವರದಿಯನ್ನು ಉಲ್ಲೇಖಿಸಿ ಚೀನಾ ಮಾಧ್ಯಮವೊಂದು ವರದಿ ಮಾಡಿದೆ.
ಪ್ರಸ್ತುತ ನಡೆಯುತ್ತಿರುವ ಚೀನಾ ರಾಷ್ಟ್ರೀಯ ಸಂಸತ್ತಿನ ಅಧಿವೇಶನದಲ್ಲಿ ಈ ಯೋಜನೆಯನ್ನು ಮಂಡಿಸಲಾಗಿದೆ. 1962ರ ಚೀನಾ-ಭಾರತ ಯುದ್ಧದ ಬಳಿಕ ಸೇನಾ ಉದ್ದೇಶಗಳಿಗಾಗಿ ಅಕ್ಸಾಯ್ ಚೀನಾ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ವಿವಾದಿತ ರಸ್ತೆಗೆ ಸಮನಾಂತರವಾಗಿ ಹೊಸ ಹೆದ್ದಾರಿ ನಿರ್ಮಾಣಗೊಳ್ಳಲಿದೆ.

Leave a Reply

Your email address will not be published. Required fields are marked *

error: Content is protected !!