ಉದಯವಾಹಿನಿ, ಕೈರೋ : ಮಹಿಳೆಯರಿಗೆ ಸುರಕ್ಷತೆ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ಘಟನೆಗಳು ಈಗಲೂ ಆಗಾಗ ನಡೆಯುತ್ತಿರುತ್ತವೆ. ಅದರಲ್ಲೂ ಒಂಟಿ ಮಹಿಳೆಗೆ ಎಲ್ಲೂ ರಕ್ಷಣೆ ಇಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಈಜಿಪ್ಟ್ ಪ್ರವಾಸಕ್ಕಾಗಿ ಒಬ್ಬಂಟಿಯಾಗಿ ತೆರಳಿದ್ದ ಮಹಿಳೆಯೊಬ್ಬರು ಕಿರುಕುಳ ಎದುರಿಸಿರುವ ಘಟನೆಯನ್ನು ಶೇರ್ ಮಾಡಿಕೊಂಡಿದ್ದಾರೆ‌. ಈಜಿಪ್ಟ್‌ಗೆ ಪ್ರವಾಸ ಹೋಗಿದ್ದ ಯುವತಿಗೆ ಸ್ಕೂಬಾ ಡೈವಿಂಗ್ ಕಲಿಸುವಾಗ ಅಲ್ಲಿನ ತರಬೇತುದಾರ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಘಟನೆಯನ್ನು ಯುವತಿ ಶೇರ್‌ ಮಾಡಿಕೊಂಡಿದ್ದಾರೆ.

ಭೂಮಿ ಮೇಲೆ ಅಲ್ಲದೆ ನೀರೊಳಗಿನ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ರಾಶಾ ಮೆಡೀನ್ ಎಂಬ ಯುವತಿ ತನ್ನ ಮೇಲಾದ ಈ ದೌರ್ಜನ್ಯವನ್ನು ಶೇರ್ ಮಾಡಿಕೊಂಡಿದ್ದಾರೆ. ವಿಡಿಯೊದಲ್ಲಿ ತರಬೇತುದಾರನು ನೀರಿನ ಅಡಿಯಲ್ಲಿರುವಾಗ ಪದೇ ಪದೆ ಯುವತಿಯನ್ನು ಸ್ಪರ್ಶಿಸುತ್ತಿರುವುದು ಕಾಣಬಹುದು.

Leave a Reply

Your email address will not be published. Required fields are marked *

error: Content is protected !!