ಉದಯವಾಹಿನಿ, ಬ್ಯಾಂಕಾಕ್, : ಮತ್ತೊಂದು ಭಾರಿ ಏರ್‌ ಇಂಡಿಯಾ ವಿಮಾನವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಹೈದರಾಬಾದ್‌ನಿಂದ ಹೊರಟ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಥೈಲ್ಯಾಂಡ್‍ನ ಫುಕೆಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಠಿಣ ಲ್ಯಾಂಡಿಂಗ್‌ ನಡೆಸಿದೆ. ಪರಿಣಾಮ ವಿಮಾನದ ಮುಂಭಾಗದ ಲ್ಯಾಂಡಿಂಗ್ ಗೇರ್‌ಗೆ ಹಾನಿಯಾಗಿದೆ. ಇದರಿಂದ ಅಧಿಕಾರಿಗಳು ರನ್‌ವೇ ಅನ್ನು ಸುಮಾರು ಆರು ಗಂಟೆಗಳ ಕಾಲ ಮುಚ್ಚಬೇಕಾಗಿದೆ.
IX938 ವಿಮಾನದಲ್ಲಿದ್ದ 133 ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಘಟನೆಯ ನಂತರ ಪರಿಶೀಲನೆ ಮತ್ತು ಸ್ವಚ್ಛತೆ ಕಾರ್ಯಗಳನ್ನು ನಡೆಸಲು ರನ್‌ವೇಯನ್ನು ಸ್ಥಳೀಯ ಸಮಯ ಸಂಜೆ ಸುಮಾರು 6 ಗಂಟೆಯವರೆಗೆ ಮುಚ್ಚಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!