ಉದಯವಾಹಿನಿ, ತಮಿಳು ನಟ ರವಿ ಮೋಹನ್ ಹಾಗೂ ಪತ್ನಿ ಆರತಿ ಡಿವೋರ್ಸ್ ಪಡೆಯಲು ಮುಂದಾಗಿದ್ದು, ಈಗಾಗಲೇ ಚೆನ್ನೈ ಕುಟುಂಬ ನ್ಯಾಯಾಲಯದಲ್ಲಿ ಡಿವೋರ್ಸ್ ಅರ್ಜಿ ವಿಚಾರಣೆ ಆರಂಭವಾಗಿದೆ.
ಇದರ ನಡುವೆ ನಟ ರವಿ ಮತ್ತೆ ತಮ್ಮ ನೋವನ್ನು ಹೊರಹಾಕಿದ್ದು, ಸಮಾಜದಲ್ಲಿ ಗಂಡಸರೇ ಅತಿದೊಡ್ಡ ಸಂತ್ರಸ್ತರು, ತಾನು ಪ್ರೀತಿಸಿದವರಿಗಾಗಿ ಏನು ಮಾಡಿದ್ದೇನೆ ಮತ್ತು ತನ್ನ ಮನಸ್ಸಿನ ಶುದ್ಧತೆ ಏನು ಎಂಬುದು ಒಂದು ದಿನ ಎಲ್ಲರಿಗೂ ತಿಳಿಯುತ್ತದೆ ಎಂದು ಹೇಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ರವಿ, ನಾನು ಶಾಂತವಾಗಿ ನನ್ನ ಜೀವನವನ್ನು ಮತ್ತೆ ಕಟ್ಟಿಕೊಳ್ಳುತ್ತಿದ್ದೇನೆ. ಈ ಮಾತನ್ನು ಮತ್ತೊಮ್ಮೆ ಹೇಳಬೇಕೆನಿಸಿತು. ನಿಮಗೆ ಏನು ಹೇಳಬೇಕೋ ಅದನ್ನೇ ಮತ್ತೆ ಮತ್ತೆ ಹೇಳಿ, ಯಾಕಂದ್ರೆ ಮಹಿಳೆಯರು ಹೇಳುವುದು ಮಾತ್ರ ಸರಿ ಎಂದು ನೀವು ಭಾವಿಸಿದ್ದೀರಿ. ಆದರೆ ಇಲ್ಲಿ ಗಂಡಸರೇ ಅತಿದೊಡ್ಡ ಸಂತ್ರಸ್ತರು, ನಮ್ಮ ನ್ಯಾಯಾಂಗ ವ್ಯವಸ್ಥೆಗೂ ಇದು ಅರಿವಿದೆ. ನಾನು ಪ್ರೀತಿಸಿದವರಿಗಾಗಿ ಏನು ಮಾಡಿದ್ದೇನೆ, ನನ್ನ ಮನಸ್ಸಿನ ಶುದ್ಧತೆ ಏನು ಎಂಬುದು ಒಂದು ದಿನ ನಿಮ್ಮೆಲ್ಲರಿಗೂ ಅರ್ಥವಾಗುತ್ತದೆ. ದಯವಿಟ್ಟು ಒಬ್ಬ ಮನುಷ್ಯನನ್ನು ಬದುಕಲು ಬಿಡಿ. ನಿಮ್ಮ ಕೆಟ್ಟ ಆಲೋಚನೆಗಳನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ನಾನು ನನ್ನ ದಾರಿಯಲ್ಲಿ ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!