ಉದಯವಾಹಿನಿ, ಲಕ್ನೋ: ಹಿಂದೂ ಯುವಕನ ಜೊತೆ ಸಂಬಂಧ ಹೊಂದಿದ್ದಕ್ಕೆ ಕೋಪಗೊಂಡು 19ರ ಮಗಳಿಗೆ ವಿಷವಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕೊಲೆ ಪ್ರಕರಣದಲ್ಲಿ ಯುವತಿಯ ತಾಯಿ ಮತ್ತು ಆಕೆಯ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಅಫ್ಸಾನಾ (48) ಮತ್ತು ಆಕೆಯ ಮಗ ಅಫ್ಸರ್ (26) ಬಂಧಿತ ಆರೋಪಿಗಳು. ಅವರನ್ನು ಸೋಮವಾರ ಸಂಜೆ ಟಿಕ್ರಿ ತಿರುವು ಗ್ರಾಮದ ಬಳಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ. ಫರ್ಜಾನಾ ಹತ್ಯೆಯಾದ ಯುವತಿ. ಮಾ.2 ರಂದು ಹೊಲವೊಂದರಲ್ಲಿ ಈಕೆಯ ಶವ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಯುವತಿಯ ತಾಯಿ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಗೊತ್ತಾಗಿದೆ.

ಮಾ.2 ರ ಮಧ್ಯರಾತ್ರಿ ತಾಯಿ ಮತ್ತು ಸಹೋದರ ಸೇರಿಕೊಂಡು ಫರ್ಜಾನಾಳನ್ನು ಹೊಲಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಬೇರೊಂದು ಹೊಲಕ್ಕೆ ಸ್ಥಳಾಂತರಿಸಿದ್ದಾರೆ. ಬಳಿಕ ತಾಯಿ ಫತೇಪುರಕ್ಕೆ ತೆರಳಿದ್ದಾಳೆ. ಪುತ್ರ ಮನೆಗೆ ವಾಪಸ್‌ ಆಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!