ಉದಯವಾಹಿನಿ, ಮುಂಬೈ: ಟಾಟಾ ಸಿಯೆರಾ ಕಾರುಗಳ ಬುಕ್ಕಿಂಗ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ಈ ಕಾರಿನ ಉತ್ಪಾದನೆಯನ್ನು ಹೆಚ್ಚಿಸಿದೆ. ಈಗಾಗಲೇ ಸಿಯೆರಾ ಕಾರುಗಳ ಬುಕ್ಕಿಂಗ್ 1 ಲಕ್ಷ ದಾಟಿದೆ. ಗ್ರಾಹಕರ ಕಾಯುವ ಅವಧಿ ಕಡಿಮೆ ಮಾಡಲು ಉತ್ಪಾದನೆ ಹೆಚ್ಚಿಸಿದ್ದು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರು ವಿತರಣೆಯಾಗಲಿದೆ.
2025ರ ನವೆಂಬರ್‌ನಲ್ಲಿ ಬಿಡುಗಡೆಯಾದ ಈ ಕಾರಿಗೆ ಸದ್ಯ 3-4 ತಿಂಗಳು ಕಾಯಬೇಕಾಗುತ್ತದೆ. ಈ ಜನವರಿಯಿಂದ ವಿತರಣೆ ಪ್ರಾರಂಭವಾದಾಗಿನಿಂದ ಟಾಟಾ ಮೋಟಾರ್ಸ್ ಈಗಾಗಲೇ 14 ಸಾವಿರಕ್ಕೂ ಹೆಚ್ಚು ಸಿಯೆರಾ ಕಾರುಗಳನ್ನು ವಿತರಿಸಿದೆ.ಉತ್ಪಾದನೆಯು ತಿಂಗಳಿನಿಂದ ತಿಂಗಳಿಗೆ ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಸ್ಥಿರವಾಗಿ ಏರಿಕೆಯಾಗುತ್ತಿದೆ. ಬುಕ್ಕಿಂಗ್‌ನಿಂದ ವಿತರಣೆಯವರೆಗಿನ ಕಾಯುವ ಅವಧಿಯನ್ನು ಕ್ರಮೇಣ ಕಡಿಮೆ ಮಾಡಲು ನಮ್ಮ ತಂಡಗಳು ಉತ್ಪಾದನೆ ಮತ್ತು ಪೂರೈಕೆದಾರರ ನಡುವೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ.
SUV ವಿಭಾಗದಲ್ಲಿ ಸ್ಥಾನ ಪಡೆದಿರುವ ಈ ಕಾರು 7 ಮಾದರಿಗಳಲ್ಲಿ ಬಿಡುಗಡೆಯಾಗಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ 11 ಲಕ್ಷ ರೂ. ನಿಂದ ಆರಂಭವಾಗಿ 21 ಲಕ್ಷ ರೂ. ವರೆಗಿದೆ.
