ಉದಯವಾಹಿನಿ, ನವದೆಹಲಿ: ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಭಾರತದ ತೈಲ ಟ್ಯಾಂಕರ್‌ಗಳಿಗೆ ಮತ್ತು ಕಂಟೈನರ್ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಇರಾನ್ ಅನುಮತಿ ನೀಡಿದೆ.ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ ನಡುವಿನ ಮಾತುಕತೆಯ ನಂತರ ಅನುಮತಿ ಸಿಕ್ಕಿದೆ.ತನ್ನ ಮೇಲೆ ಯುದ್ಧ ಸಾರಿದ್ದಕ್ಕೆ ಹಾರ್ಮುಜ್ ಜಲಸಂಧಿಯಯನ್ನು ಇರಾನ್ ಮುಚ್ಚಿದೆ. ಅಷ್ಟೇ ಅಲ್ಲದೇ ಅಮೆರಿಕ, ಇಸ್ರೇಲ್ ಮತ್ತು ಅದರ ಮಿತ್ರ ದೇಶಗಳ ತೈಲ ಟ್ಯಾಂಕರ್ ಮತ್ತು ಹಡಗುಗಳು ಪ್ರವೇಶಿಸಿದರೆ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಮಂಗಳವಾರ ಎರಡು ದೇಶಗಳ ನಾಯಕರು ಮಾತುಕತೆ ನಡೆಸಿದ್ದರು. ಕಳೆದ ತಿಂಗಳು ಅಮೆರಿಕ ಮತ್ತು ಇಸ್ರೇಲ್ ಯುದ್ಧ ಆರಂಭಿಸಿದ ಮೂರನೇ ಬಾರಿ ಉಭಯ ನಾಯಕರು ಮಾತನಾಡಿದ್ದರು. ಅನುಮತಿಯ ಬೆನ್ನಲ್ಲೇ ಭಾರತೀಯ ಟ್ಯಾಂಕರ್‌ಗಳಾದ ಪುಷ್ಪಕ್ ಮತ್ತು ಪರಿಮಲ್ ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಹಾದುಹೋಗುತ್ತಿವೆ ಎಂದು ವರದಿಯಾಗಿದೆ.
ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಭಾರತವು ತನ್ನ ಎಲ್‌ಎನ್‌ಜಿಯ ಸುಮಾರು 50 ಪ್ರತಿಶತವನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಆ ಆಮದುಗಳಲ್ಲಿ 90 ಪ್ರತಿಶತವು ಹಾರ್ಮುಜ್ ಜಲಸಂಧಿಯಿಂದಲೇ ಬರುತ್ತವೆ ಎಂದು ಹೇಳಿದ್ದರು.
