ಉದಯವಾಹಿನಿ, ಪ್ಯೊಂಗ್ಯಾಂಗ್: ಮಧ್ಯಪ್ರಾಚದಲ್ಲಿ ಇರಾನ್ ಹಾಗೂ ಇಸ್ರೇಲ್ ನಡುವೆ ಜಂಟಿ ದಾಳಿ ನಡೆಯುತ್ತಿರುವ ಹೊತ್ತಲ್ಲೇ ಉತ್ತರ ಕೋರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ಮಗಳೊಂದಿಗೆ ಕ್ರೂಸ್ ಕ್ಷಿಪಣಿ ಪರೀಕ್ಷೆ ವೀಕ್ಷಿಸಿದರು.ಉತ್ತರ ಕೊರಿಯಾದ ಅಜ್ಞಾತ ಸ್ಥಳದಲ್ಲಿ ನಾಯಕ ಕಿಮ್ ಜಾಂಗ್ ಉನ್ ಅವರು ತಮ್ಮ ಮಗಳು ಕಿಮ್ ಜು ಏ (Kim Ju Ae) ಜೊತೆಗೆ `ಚೋ ಹ್ಯೋನ್ ನೌಕಾ ವಿಧ್ವಂಸಕ’ ಕ್ರೂಸ್ ಕ್ಷಿಪಣಿ ಉಡಾವಣೆಯನ್ನು ವೀಕ್ಷಿಸಿದರು.
ಕಾನ್ಫರೆನ್ಸ್ ಕೊಠಡಿಯಲ್ಲಿ ಕುಳಿತು ವಿಡಿಯೋ ಮೂಲಕ ಕ್ಷಿಪಣಿ ಉಡಾವಣೆಯಾದ್ದದ್ದನ್ನು ವೀಕ್ಷಿಸಿದ ಫೋಟೋಗಳನ್ನು ಉತ್ತರ ಕೊರಿಯಾದ ಅಧಿಕೃತ ಸುದ್ದಿಸಂಸ್ಥೆ `ಕೆಸಿಎನ್‌ಎ’ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಕಿಮ್ ಜಾಂಗ್ ಶೂಟಿಂಗ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿದೆ.
ಸುಮಾರು 13 ವರ್ಷದ ಕಿಮ್ ಜೂ ಏ, ಇತ್ತೀಚಿನ ದಿನಗಳಲ್ಲಿ ತನ್ನ ತಂದೆಯ ಜೊತೆ ಸೇನಾ ಪರೇಡ್ ಮತ್ತು ಶಸ್ತ್ರಾಸ್ತ್ರ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಹೀಗಾಗಿ ಮಗಳನ್ನೇ ಮುಂದಿನ ಉತ್ತರಾಧಿಕಾರಿಯಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ
