ಉದಯವಾಹಿನಿ, ತ್ರಿಶೂರ್(ಕೇರಳ): ಎಲ್‌ಪಿಜಿ ಬಿಕ್ಕಟ್ಟನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ. ಹೆಚ್ಚುವರಿ ಪೂರೈಕೆಯ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ತಿಳಿಸಿದ್ದಾರೆ.

ತ್ರಿಶೂರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಬುಧವಾರ ಸಂಸತ್ತಿನಲ್ಲಿ ಎಲ್‌ಪಿಜಿ ಬಿಕ್ಕಟ್ಟಿನ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ರಾಜತಾಂತ್ರಿಕ ಸೂಕ್ಷ್ಮತೆಗಳಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಪೂರೈಕೆಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಬಹಿರಂಗಪಡಿಸಲಾಗದು ಎಂದರು.

ಹಾರ್ಮುಜ್ ಜಲಸಂಧಿ ಸಮಸ್ಯೆ ಜನಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದರ ಕುರಿತು ಪ್ರಧಾನಿ ಮೋದಿ ಎಲ್ಲಾ ದೇಶಗಳೊಂದಿಗೆ ಮಾತನಾಡಿದ್ದು, ವಿನಾಯಿತಿಗಳನ್ನು ಕೋರಿದ್ದಾರೆ. ಈ ಕುರಿತು ನಿಖರ ದಾಖಲೆಯನ್ನು ನಾನು ನೀಡುತ್ತಿಲ್ಲ. ಆದರೆ ಹೆಚ್ಚಿನ ಎಲ್‌ಪಿಜಿ ಪಡೆಯಲು ನಮಗೆ ಮಾರ್ಗಗಳು ತೆರೆದುಕೊಳ್ಳುತ್ತಿವೆ ಎಂದು ಹೇಳಿದರು.

ಎಲ್‌ಪಿಜಿ ಬಿಕ್ಕಟ್ಟು ಅನೇಕ ದೇಶಗಳಲ್ಲಿ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ಆಸ್ಪತ್ರೆಗಳು ಮತ್ತು ಸ್ಮಶಾನಗಳಂತಹ ತುರ್ತು ಉಪಯುಕ್ತತೆ ಸೇವೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಅನಿಲ ಬೆಲೆಗಳನ್ನು ನಿಯಂತ್ರಿಸಲು ಒಂದು ಕಾರ್ಯವಿಧಾನವಿದ್ದು, ಅದರನುಸಾರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಎಲ್‌ಪಿಜಿ ಬಿಕ್ಕಟ್ಟನ್ನು ಪರಿಹರಿಸಲು ಪೂರ್ಣ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

ಕೊರತೆಯಿಂದಾಗಿ ಮುಚ್ಚುತ್ತಿರುವ ರೆಸ್ಟೋರೆಂಟ್‌ಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಷ್ಕರಗಳು ನಡೆಯಬಹುದು. ಹಾರ್ಮುಜ್ ಜಲಸಂಧಿಯ ವಿಷಯವಾಗಿ ನಾನೀಗ ನಿರ್ಣಾಯಕ ಪರಿಸ್ಥಿತಿಯಲ್ಲಿದ್ದೇವೆ. ಇದಕ್ಕಾಗಿ ಇಡೀ ಜಗತ್ತು ಪ್ರತಿಭಟನೆ ನಡೆಸಬೇಕಾಗುತ್ತದೆ. ಕೋವಿಡ್ ಸಮಯ ಮತ್ತು ಯುದ್ಧಕಾಲದ ಸಂದರ್ಭಗಳಂತೆ ಈ ಬಿಕ್ಕಟ್ಟಿನ ಸಮಯದಲ್ಲಿಯೂ ಜನರು ಸ್ವಯಂ ಸಂಯಮ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.

ದೇಶೀಯ ಎಲ್‌ಪಿಜಿ ಪೂರೈಕೆಗೆ ಸುಮಾರು ಎರಡೂವರೆ ದಿನಗಳು ಬೇಕಾಗುತ್ತದೆ. ಜನರು ಆತಂಕಕ್ಕೊಳಗಾಗಿ ಗ್ಯಾಸ್​ ಬುಕ್ಕಿಂಗ್​ಗೆ ಒಳಗಾಗದಂತೆ ಮನವಿ ಮಾಡಿದೆ. ನಾವು ನಮ್ಮ ಎಲ್‌ಪಿಜಿಯ ಅಗತ್ಯದ ಸುಮಾರು ಶೇ.60ರಷ್ಟನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಶೇ.90ರಷ್ಟು ಹಾರ್ಮುಜ್​ ಜಲಸಂಧಿ ಮೂಲಕವೇ ಬರುತ್ತಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!