ಉದಯವಾಹಿನಿ, ಪ್ಯಾರಿಸ್‌: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಸೃಷ್ಟಿಯಾಗಿರುವ ತೈಲ ಬಿಕ್ಕಟ್ಟು ಎದುರಿಸಲು ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ (IEA) 32 ಸದಸ್ಯ ರಾಷ್ಟ್ರಗಳು ತೈಲ ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿವೆ.
ತುರ್ತು ಸಂದರ್ಭದಲ್ಲಿ ಬಳಕೆಗಾಗಿ ದಾಸ್ತಾನು(Emergency Reserves) ಮಾಡಿರುವ ತೈಲವನ್ನು( ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಈ ದೇಶಗಳ ನಡುವೆ ಒಮ್ಮತ ಮೂಡಿಲ್ಲ ಎಂದು ಎರಡು ದಿನಗಳ ಹಿಂದೆ ವರದಿಯಾಗಿತ್ತು.
ಈಗ ಐಇಎ ಕರೆದ ಮಹತ್ವದ ಸಭೆಯಲ್ಲಿ ಈ ದೇಶಗಳು 400 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸರ್ವಾನುಮತದಿಂದ ಒಪ್ಪಿಕೊಂಡಿವೆ. ಐಇಎ ಇತಿಹಾಸದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ದಾಸ್ತಾನು ಇರಿಸಿದ ತೈಲವನ್ನು ಬಿಡುಗಡೆ ಮಾಡುತ್ತಿರುವುದು ಇದೇ ಮೊದಲು.

ಐಇಎ ಸದಸ್ಯ ದೇಶಗಳು 1.2 ಶತಕೋಟಿ ಬ್ಯಾರೆಲ್‌ಗಳಿಗಿಂತ ಹೆಚ್ಚಿನ ತುರ್ತು ದಾಸ್ತಾನುಗಳನ್ನು ಹೊಂದಿದ್ದು ಇನ್ನೂ 600 ಮಿಲಿಯನ್ ಬ್ಯಾರೆಲ್ ತೈಲವನ್ನು ಕೈಗಾರಿಕಾ ದಾಸ್ತಾನುಗಳನ್ನು ಇರಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!